‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?

|

Updated on: Sep 20, 2024 | 11:03 AM

ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ‘ಉಪೇಂದ್ರ’ ಸಿನಿಮಾ ರೀ ರಿಲೀಸ್ ಆಗಿದೆ. ಇದಕ್ಕೆ ಜನಸಾಗಾರ ಹರಿದು ಬಂದಿದೆ. ನರ್ತಕಿ ಚಿತ್ರಮಂದಿರದಲ್ಲಿ ಮೊದಲ ಸಿನಿಮಾ ಶೋ 6 ಗಂಟೆಗೆ ಆರಂಭ ಆಗಿದೆ. ಪ್ರೇಕ್ಷಕರ ಜೊತೆಗೆ ಕುಳಿತು ಉಪೇಂದ್ರ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಇಂದು ‘ಉಪೇಂದ್ರ’ ಸಿನಿಮಾ ರೀ-ರಿಲೀಸ್ ಆಗಿದೆ. ಈ ಸಿನಿಮಾ ಮೊದಲು ರಿಲೀಸ್ ಆಗಿದ್ದು 1999ರಲ್ಲಿ. ಅಂದರೆ ಈ ಚಿತ್ರ ಬಿಡುಗಡೆ ಕಂಡು 25 ವರ್ಷಗಳು ತುಂಬಿವೆ. ಈ ಸಿನಿಮಾ ನೋಡಿ ಉಪೇಂದ್ರ ಅವರು ಭಾವುಕರಾಗಿದ್ದಾರೆ. ಆ ಬಳಿಕ ಮಾತನಾಡಿದ ಉಪೇಂದ್ರ, ‘ಈಗಲೂ ಸಿನಿಮಾ ನೋಡಿದ್ರೆ 20 ವರ್ಷ ಅಡ್ವಾನ್ಸ್ ಆಗಿಯೇ ಇದೆ ಅನಿಸುತ್ತದೆ. ಆ ಸಮಯದಲ್ಲಿ ನನ್ನೊಳಗಿರುವ ಭಾವನೆ ಆತರಹದ ಸಿನಿಮಾ ಮಾಡಿಸಿದೆ. ಈ ಚಿತ್ರವನ್ನು ಭಗವಂತ ಮಾಡಿಸಿದ್ದಾನೆ ಅಷ್ಟೇ. ನೆಕ್ಸ್ಟ್​ ಜನರೇಶನ್ ಕೂಡ ಈ ಚಿತ್ರವನ್ನು ಇದೇ ರೀತಿ ಎಂಜಾಯ್ ಮಾಡುತ್ತದೆ ಅನ್ನೋದು ನನ್ನ ನಂಬಿಕೆ’ ಎಂದರು ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.