Upendra: ‘ನಿನ್ನ ಈ ಅಳಕು ಪಳುಕು ಕುಲುಕನ್ನು ನೋಡಿ..’: ನಟಿ ಶ್ರೀಯಾ ಶರಣ್​ ಎದುರು ಡೈಲಾಗ್​ ಹೊಡೆದ ಉಪ್ಪಿ

Updated on: Feb 27, 2023 | 4:46 PM

Kabza Audio Launch event: ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ‘ಕಬ್ಜ’ ಚಿತ್ರದ ಆಡಿಯೋ ಲಾಂಚ್​ ಆಗಿದೆ. ಈ ವೇಳೆ ಶ್ರೀಯಾ ಶರಣ್​ ಅವರನ್ನು ನೋಡಿ ಉಪೇಂದ್ರ ಡೈಲಾಗ್​ ಹೊಡೆದಿದ್ದಾರೆ.

ಉಪೇಂದ್ರ ಅಭಿನಯದ ‘ರಕ್ತ ಕಣ್ಣೀರು’ ಸಿನಿಮಾದ ಡೈಲಾಗ್​ಗಳನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ. ಉಪ್ಪಿ ಯಾವುದೇ ವೇದಿಕೆಗೆ ಹೋದರೂ ‘ರಕ್ತ ಕಣ್ಣೀರು’ ಚಿತ್ರದ ಡೈಲಾಗ್​ ಹೊಡೆಯಲಿ ಎಂದು ಜನರು ಬಯಸುತ್ತಾರೆ. ಭಾನುವಾರ (ಫೆ.26) ಶಿಡ್ಲಘಟ್ಟದಲ್ಲಿ ‘ಕಬ್ಜ’ (Kabzaa Movie) ಚಿತ್ರದ ಆಡಿಯೋ ರಿಲೀಸ್​ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಶ್ರೀಯಾ ಶರಣ್​ (Shriya Saran) ಕೂಡ ಇದ್ದರು. ಅವರನ್ನು ನೋಡಿ ಉಪೇಂದ್ರ (Upendra) ಅವರು ‘ರಕ್ತ ಕಣ್ಣೀರು’ ಚಿತ್ರದ ಡೈಲಾಗ್​ ಹೊಡೆದರು. ‘ನಿನ್ನ ಈ ಅಳಕು ಪಳುಕು ಕುಲುಕನ್ನು ನೋಡಿ ಮೈ ಝಳಕಾಗಿ ತುಳಕದಿಂ ತುಳುಕುತ್ತಿರುವ..’ ಎಂದು ಡೈಲಾಗ್​ ಹೇಳುತ್ತಿದ್ದಂತೆಯೇ ಶ್ರೀಯಾ ಶರಣ್​ ನಾಚಿ ನೀರಾದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More