ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್
ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದ ‘ಉಪೇಂದ್ರ’ ಸಿನಿಮಾ 1999 ರಲ್ಲಿ ಮೊದಲ ಬಾರಿ ಬಿಡುಗಡೆ ಆಗಿತ್ತು. ಆಗ ಈ ಸಿನಿಮಾ ಹೊಸ ಅಲೆ ಎಬ್ಬಿಸಿತ್ತು. ಪ್ರೇಮಾ, ದಾಮಿನಿ, ರವೀನಾ ಟಂಡನ್ ಅವರುಗಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಈ ಸಿನಿಮಾ ಸೆಪ್ಟೆಂಬರ್ 20ರ ಶುಕ್ರವಾರ ಮರು ಬಿಡುಗಡೆ ಆಗಿದೆ.
ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ‘ಉಪೇಂದ್ರ’ ಸಿನಿಮಾ ರೀ ರಿಲೀಸ್ ಆಗಿದೆ. ಇದಕ್ಕೆ ಜನಸಾಗಾರ ಹರಿದು ಬಂದಿದೆ. ನರ್ತಕಿ ಚಿತ್ರಮಂದಿರದಲ್ಲಿ ಮೊದಲ ಸಿನಿಮಾ ಶೋ 6 ಗಂಟೆಗೆ ಆರಂಭ ಆಗಿದೆ. ಪ್ರೇಕ್ಷಕರ ಜೊತೆಗೆ ಕುಳಿತು ಉಪೇಂದ್ರ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಮೊದಲ ಶೋನಲ್ಲಿ ಚಿತ್ರ ಮಂದಿರ ಹೌಸ್ಫುಲ್ ಆಗಿದೆ. ಒಂದೊಂದು ಡೈಲಾಗ್ ಗೂ ಶಿಳ್ಳೆ, ಚಪ್ಪಾಳೆ ಬಿದ್ದಿದೆ. ಉಪ್ಪಿ ಜೊತೆ ಸಿನಿಮಾ ನೋಡಿದ ಖುಷಿಯಲ್ಲಿ ಫ್ಯಾನ್ಸ್ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.