19 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಆದರ್ಶ್
Kanpur Superstars vs Kashi Rudras: 54 ಎಸೆತಗಳನ್ನು ಎದುರಿಸಿದ ಆದರ್ಶ್ ಸಿಂಗ್ 12 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 113 ರನ್ ಬಾರಿಸಿದರು. ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.
19 ಎಸೆತಗಳಲ್ಲಿ 10 ಸಿಕ್ಸ್… ಇಂತಹದೊಂದು ವಿಸ್ಫೋಟಕ ಬ್ಯಾಟಿಂಗ್ಗೆ ಸಾಕ್ಷಿಯಾಗಿದ್ದು ಉತ್ತರ ಪ್ರದೇಶ್ ಟಿ20 ಲೀಗ್. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕಾನ್ಪುರ್ ಸೂಪರ್‌ಸ್ಟಾರ್ಸ್ ಮತ್ತು ಕಾಶಿ ರುದ್ರಾಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಕಾಶಿ ರುದ್ರಾಸ್ ತಂಡವು ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 28 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಈ ವೇಳೆ ಕ್ರೀಸ್ಗೆ ಆಗಮಿಸಿದ 20 ವರ್ಷದ ಯುವ ದಾಂಡಿಗ ಆದರ್ಶ್ ಸಿಂಗ್ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದರು.
ಈ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಆದರ್ಶ್ ಮೊದಲ 35 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 38 ರನ್ಗಳು ಮಾತ್ರ. ಈ ವೇಳೆ ಅವರ ಬ್ಯಾಟ್ನಿಂದ 2 ಸಿಕ್ಸರ್ಗಳು ಮಾತ್ರ ಮೂಡಿಬಂದಿದ್ದವು.
ಆದರೆ ಡೆತ್ ಓವರ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಯುವ ದಾಂಡಿಗ ಇಡೀ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದರು. ಅಂದರೆ ಅಂತಿಮ ಓವರ್ಗಳ ವೇಳೆ ಎದುರಿಸಿದ 19 ಎಸೆತಗಳಲ್ಲಿ ಆದರ್ಶ್ ಸಿಂಗ್ ಬರೋಬ್ಬರಿ 10 ಸಿಕ್ಸ್ ಸಿಡಿಸಿದ್ದರು.
ಅಲ್ಲದೆ 54 ಎಸೆತಗಳನ್ನು ಎದುರಿಸಿದ ಆದರ್ಶ್ ಸಿಂಗ್ 12 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 113 ರನ್ ಬಾರಿಸಿದರು. ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.
199 ರನ್ಗಳ ಕಠಿಣ ಗುರಿ ಬೆನ್ನತ್ತಿದ ಕಾಶಿ ರುದ್ರಾಸ್ ತಂಡವು 15 ಓವರ್ಗಳಲ್ಲಿ ಕೇವಲ 70 ರನ್ಗಳಿಗೆ ಆಲೌಟ್ ಆಗುವ ಮೂಲಕ 128 ರನ್ಗಳಿಂದ ಸೋಲೊಪ್ಪಿಕೊಂಡಿತು.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

