ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಇರಾಕ್‌ನ ಕುರ್ದಿಸ್ತಾನ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಶಸ್ತ್ರಾಸ್ತ್ರ ಗೋದಾಮುಗಳ ಮೇಲೆ ಇರಾನ್ ಹೈಪರ್ಸಾನಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಅಮೆರಿಕಾದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಈ ಕ್ರಮ ಕೈಗೊಂಡಿದ್ದು, ಅಮೆರಿಕಾ ಇರಾನ್‌ನ ಪ್ರಮುಖ ಬಂದರ್ ಅಬ್ಬಾಸ್ ಮತ್ತು ಹಾರ್ಮೋಜ್ಗನ್ ಪ್ರಾಂತ್ಯದ ಸೇತುವೆಗಳನ್ನು ಧ್ವಂಸಗೊಳಿಸಿದೆ.
ಟೆಹ್ರಾನ್, ಜುಲೈ 18: ಇರಾಕ್‌ನ ಕುರ್ದಿಸ್ತಾನ ಹಾಗೂ ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಇರಾನ್‌ನ ತೀವ್ರ ದಾಳಿಗೆ ತುತ್ತಾಗಿವೆ. ಅಮೆರಿಕ-ಇರಾನ್ ಯುದ್ಧ ತೀವ್ರಗೊಂಡಿದ್ದು, ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಹೈಪರ್ಸಾನಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿಗಳನ್ನು ಮುಂದುವರೆಸಿದೆ. ಇರಾನ್‌ನ ಈ ದಾಳಿಗಳಿಂದ ಅಮೆರಿಕಾದ ಸಂವಹನ ವ್ಯವಸ್ಥೆಗಳು, ಇಂಧನ ಡಿಪೋಗಳು, ಶಸ್ತ್ರಾಸ್ತ್ರಗಳ ಸಂಗ್ರಹಣೆ ಘಟಕಗಳು ಮತ್ತು ಯಂತ್ರೋಪಕರಣಗಳ ಘಟಕಗಳು ಧ್ವಂಸವಾಗಿವೆ ಎಂದು ವರದಿಯಾಗಿದೆ.
ಇರಾಕ್‌ನ ಕುರ್ದಿಸ್ತಾನ ಪ್ರದೇಶದ ಮೇಲೆ ಇರಾನ್ ಭಾರಿ ದಾಳಿ ನಡೆಸಿದೆ. ಇರಾಕ್‌ನಲ್ಲಿರುವ ಅಮೆರಿಕಾದ ಶಸ್ತ್ರಾಸ್ತ್ರಗಳ ಗೋದಾಮುಗಳು ಮತ್ತು ಹಡಗುಗಳ ಮೇಲೆ ಇರಾನ್ ದಾಳಿ ಮಾಡಿದೆ. ಅಮೆರಿಕಾದ ತೀವ್ರ ದಾಳಿಗಳಿಗೆ ಪ್ರತಿಯಾಗಿ ಇರಾನ್ ಈ ಪ್ರತಿದಾಳಿಗಳನ್ನು ನಡೆಸಿದೆ.
ಈ ಭೀಕರ ಯುದ್ಧದಲ್ಲಿ ಇರಾನ್‌ನಲ್ಲೂ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ. ಅಮೆರಿಕಾ ಕೆರ್ಮನ್ ಮತ್ತು ಹಾರ್ಮೋಜ್ಗನ್ ಪ್ರಾಂತ್ಯಗಳನ್ನು ಸಂಪರ್ಕಿಸುವ ಸೇತುವೆಗಳನ್ನು ಧ್ವಂಸಗೊಳಿಸಿದೆ. ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದ ಮೇಲೆ ಅಮೆರಿಕಾ ಕ್ಷಿಪಣಿಗಳ ಮಳೆಗರೆದಿದ್ದು, ಆ ಪ್ರಾಂತ್ಯ ಒಂದರಲ್ಲೇ ಐದಾರು ಸೇತುವೆಗಳು ಉಡೀಸ್ ಆಗಿವೆ. ಬಂದರ್ ಅಬ್ಬಾಸ್-ಖ್ಮೇರ್-ಲಾರ್ ಮಾರ್ಗದ ಗ್ರೀವೇ ಸೇತುವೆ, ಬಂದರ್ ಅಬ್ಬಾಸ್-ಖ್ಮೇರ್ ಮಾರ್ಗದ ಲ್ಯಾಟಿಡಾನ್ ಸೇತುವೆ, ಕಹೂರ್ಸ್ತಾನ್-ಲಾರ್ ಮಾರ್ಗದ ಎರಡು ಸೇತುವೆಗಳು ಮತ್ತು ಬಂದರ್ ಖ್ಮೇರ್ ಹಾಗೂ ಖ್ರೇಶರ್ ಅನ್ನು ಜೋಡಿಸುವ ಬಂದರ್ ಅಬ್ಬಾಸ್ ಸೇತುವೆ ಸೇರಿ ಪ್ರಮುಖ ಸೇತುವೆಗಳನ್ನು ಅಮೆರಿಕಾ ಸೇನೆಯು ಧ್ವಂಸಗೊಳಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

