ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ

Updated on: Jan 03, 2026 | 5:29 PM

ಇಂದು ಮುಂಜಾನೆ ವೆಬೆಜುವೆಲಾದ ಕ್ಯಾರಕಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಮೆರಿಕದಿಂದ ದೊಡ್ಡ ಪ್ರಮಾಣದ ವೈಮಾನಿಕ ದಾಳಿ ನಡೆದಿದೆ. ಕ್ಯಾರಕಾಸ್‌ನಲ್ಲಿ ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆ ಸುಮಾರಿಗೆ 7 ಸ್ಫೋಟಗಳು ಮತ್ತು ಡ್ರೋನ್ ಹಾರಾಟ ನಡೆದಿದೆ. ಇದರಿಂದ ಹಲವಾರು ನೆರೆಹೊರೆಗಳ ಜನರು ಆತಂಕದಿಂದ ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ನಿಂತರು. ಇತ್ತೀಚೆಗೆ ಮಾದಕವಸ್ತು ಕಳ್ಳಸಾಗಣೆ ಬೋಟ್​​ಗಳನ್ನು ಗುರಿಯಾಗಿಸಿಕೊಂಡಿರುವ ಅಮೆರಿಕದ ಒತ್ತಡದ ಮಧ್ಯೆ ಈ ಘಟನೆಗಳು ಸಂಭವಿಸಿವೆ. ವೆನೆಜುವೆಲಾ ಮಾದಕವಸ್ತು ವಿರೋಧಿ ಸಹಕಾರದ ಕುರಿತು ಮಾತುಕತೆಗೆ ಸಿದ್ಧವೆಂದು ಸೂಚಿಸಿದ್ದರೂ ಸಹ ಅಮೆರಿಕ ದಾಳಿ ನಡೆಸಿದೆ.

ನವದೆಹಲಿ, ಜನವರಿ 3: ಇಂದು ಮುಂಜಾನೆ ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ವೆನೆಜುವೆಲಾದ ಮೇಲೆ ದೊಡ್ಡ ಪ್ರಮಾಣದ ದಾಳಿಗಳನ್ನು ಪ್ರಾರಂಭಿಸಿತು. ಇದು ಕ್ಯಾರಕಾಸ್ ಮತ್ತು ಇತರ ನಗರಗಳಲ್ಲಿ ಸ್ಫೋಟಗಳನ್ನು ಉಂಟುಮಾಡಿತು. ಇದರಿಂದ ವೆನೆಜುವೆಲಾದಲ್ಲಿ ರಾಜಕೀಯ ಮತ್ತು ಮಿಲಿಟರಿ ಬಿಕ್ಕಟ್ಟು ಉಂಟಾಯಿತು. ಅಮೆರಿಕದ (US Airstrike) ದಾಳಿಯ ಹಿನ್ನೆಲೆಯಲ್ಲಿ ವೆನೆಜುವೆಲಾ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ರಾಜಧಾನಿ ಕ್ಯಾರಕಾಸ್‌ನಲ್ಲಿ 7 ಸ್ಫೋಟಗಳು ಕೇಳಿಬಂದ ನಂತರ ವೆನೆಜುವೆಲಾ ಸರ್ಕಾರವು ಅಮೆರಿಕ ತಮ್ಮ ದೇಶದ ಅನೇಕ ರಾಜ್ಯಗಳಲ್ಲಿನ ನಾಗರಿಕ ಮತ್ತು ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದೆ.

ಕ್ಯಾರಕಾಸ್‌ನಲ್ಲಿ ಸ್ಫೋಟಗಳು ಸಂಭವಿಸುವ ಮೊದಲು ನಡೆಯುತ್ತಿರುವ ಮಿಲಿಟರಿ ಚಟುವಟಿಕೆಯ ಕಾರಣದಿಂದ ಫೆಡರಲ್ ಏವಿಯೇಷನ್ ​​ಅಥಾರಿಟಿ ವೆನೆಜುವೆಲಾದ ವಾಯುಪ್ರದೇಶದಲ್ಲಿ ಅಮೆರಿಕದ ಕಮರ್ಷಿಯಲ್ ವಿಮಾನಗಳನ್ನು ನಿಷೇಧಿಸಿದೆ. ಕ್ಯಾರಕಾಸ್‌ನಲ್ಲಿರುವ ಮಿಲಿಟರಿ ನೆಲೆಯ ಹ್ಯಾಂಗರ್‌ನಿಂದ ಹೊಗೆ ಏರುತ್ತಿರುವುದನ್ನು ಕಾಣಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ