Video: ಉತ್ತರ ಪ್ರದೇಶ: ಮನೆ ಎದುರು ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ, ಎಳೆದೊಯ್ಯಲು ಯತ್ನ
ಉತ್ತರ ಪ್ರದೇಶದ ಖುಷಿನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮೂರು ಬೀದಿನಾಯಿಗಳು ಮಗುವನ್ನು ಕಚ್ಚಿ ಎಳೆದೊಯ್ಯಲು ಪ್ರಯತ್ನಿಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಮಗು ಜೋರಾಗಿ ಅಳುತ್ತಾ ತನ್ನ ತಾಯಿಯನ್ನು ಸಹಾಯಕ್ಕಾಗಿ ಕರೆದಿದೆ. ಮಗುವಿನ ಅಳು ಕೇಳಿ ಪಕ್ಕದ ಮನೆಯ ಮಹಿಳೆಯೊಬ್ಬರು ಓಡಿ ಬಂದಿದ್ದಾರೆ. ಮಹಿಳೆ ತಕ್ಷಣ ಮಗುವನ್ನು ಬೀದಿ ನಾಯಿಗಳ ಹಿಡಿತದಿಂದ ಬಿಡಿಸಿಕೊಂಡು ಮನೆಯೊಳಗೆ ಕರೆದೊಯ್ದರು.
ಖುಷಿನಗರ, ಜುಲೈ 10: ಉತ್ತರ ಪ್ರದೇಶದ ಖುಷಿನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮೂರು ಬೀದಿನಾಯಿಗಳು ಐದು ವರ್ಷದ ಬಾಲಕನನ್ನು ಕಚ್ಚಿ ಎಳೆದೊಯ್ಯಲು ಪ್ರಯತ್ನಿಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಬಳಿ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಮಗು ಜೋರಾಗಿ ಅಳುತ್ತಾ ತನ್ನ ತಾಯಿಯನ್ನು ಸಹಾಯಕ್ಕಾಗಿ ಕರೆದಿದೆ.
ಮಗುವಿನ ಅಳು ಕೇಳಿ ಪಕ್ಕದ ಮನೆಯ ಮಹಿಳೆಯೊಬ್ಬರು ಓಡಿ ಬಂದಿದ್ದಾರೆ. ಮಹಿಳೆ ತಕ್ಷಣ ಮಗುವನ್ನು ಬೀದಿ ನಾಯಿಗಳ ಹಿಡಿತದಿಂದ ಬಿಡಿಸಿಕೊಂಡು ಮನೆಯೊಳಗೆ ಕರೆದೊಯ್ದರು. ಈ ಘಟನೆಯು ಕಸ್ಯ ಪೊಲೀಸ್ ಠಾಣೆ ಪ್ರದೇಶದ ಅಮಿ ತ್ರಿಪಾಠಿ ನಗರದ ವಾರ್ಡ್ ಸಂಖ್ಯೆ 26 ರಲ್ಲಿ ನಡೆದಿದೆ. ಮಗುವಿನ ದೇಹದ ಹಲವು ಭಾಗಗಳಲ್ಲಿ ರಕ್ತಸ್ರಾವ ಉಂಟಾಗುತ್ತಿತ್ತು. ಸ್ಥಳೀಯ ಜನರು ಗಾಯಗೊಂಡ ಮಗುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಚಿಕಿತ್ಸೆ ಬಳಿಕ ಮಗುವಿನ ಸ್ಥಿತಿ ಸುಧಾರಿಸುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 10, 2025 11:17 AM