ಲೈಬ್ರೆರಿಗೆ ಹೋಗ್ತಿದ್ದ ಯುವತಿಯನ್ನು ಅಟ್ಟಾಡಿಸಿಕೊಂಡು ಬಂದು ಕಿರುಕುಳ ನೀಡಿದ ವ್ಯಕ್ತಿ
ಗ್ರಂಥಾಲಯಕ್ಕೆ ಹೋಗುತ್ತಿದ್ದಂತಹ ಯುವತಿಯನ್ನು ವ್ಯಕ್ತಿಯೊಬ್ಬ ಹಿಂಬಾಳಿಸುತ್ತಾ ಬಂದು ಆಕೆಗೆ ಕಿರುಕುಳ ನೀಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಎಂಬಲ್ಲಿ ನಡೆದಿದೆ. ಗ್ರಂಥಾಲಯದ ಸಿಬ್ಬಂದಿ ಕೀಚಕನಿಂದ ಯುವತಿಯನ್ನು ರಕ್ಷಣೆ ಮಾಡಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವತಿಗೆ ಕಿರುಕುಳ ನೀಡಿದ ಶಹಬಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ, ಸೆಪ್ಟೆಂಬರ್ 24: ಪುಂಡ ಯುವಕರ ಅಟ್ಟಹಾಸಗಳಿಗೆ ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಉತ್ತರ ಪ್ರದೇಶದ (Uttar Pradesh) ಲಖಿಂಪುರ ಖೇರಿಯಲ್ಲಿ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕೀಚಕನೊಬ್ಬ ಲೈಬ್ರೆರಿಗೆ ಹೋಗ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಆಕೆಗೆ ಕಿರುಕುಳ ನೀಡಿದ್ದಾನೆ. ಆತನ ದುರ್ವರ್ತನೆಯಿಂದ ಆ ಯುವತಿ ಹೆದರಿ ತಕ್ಷಣ ಲೈಬ್ರೆರಿ ಒಳಗೆ ಓಡಿ ಹೋಗಿದ್ದು, ಲೈಬ್ರೆರಿ ಸಿಬ್ಬಂದಿ ಸಹಾಯದಿಂದ ಯುವತಿ ಕೀಚಕನಿಂದ ಬಚಾವ್ ಆಗಿದ್ದಾಳೆ. ಶಹಬಾಜ್ ಅಲಿಯಾಸ್ ಅಮನ್ ಎಂಬಾತ ಆ ಯುವತಿಗೆ ಕಿರುಕುಳ ನೀಡಿದ್ದು, ಈ ಘಟನೆಯ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಇದೀಗ ಯುವತಿಗೆ ಕಿರುಕುಳ ನೀಡಿದ ಶಹಬಾಜ್ನನ್ನು ಸದರ್ ಕೊಟ್ವಾಲಿ ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್ಗೆ ತಿಳಿಸುತ್ತೇವೆಂದ ವಕೀಲ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?

