ದೇಶಸೇವೆಗೆಂದು ಸೇನೆ ಸೇರಿದ 17 ನಾಯಿ ಮರಿಗಳು: ಇವುಗಳ ವಿಶೇಷತೆಯೇನು ಗೊತ್ತಾ?

|

Updated on: Jun 17, 2023 | 11:08 AM

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ 17 ಶ್ವಾನ ಮರಿಗಳು ಭಾರತೀಯ ಸೈನ್ಯ ಸೇರಿವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ರವರ ಮನೆಯಲ್ಲಿ ಸಾಕಿರುವ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ಶ್ವಾನಗಳು ಸೇನೆ ಸೇರಿವೆ.

ಈ ಹಿಂದೆ, ಒಂದು ಕುಟುಂಬದಿಂದ ಒಬ್ಬ ಮಗನನ್ನು ದೇಶಸೇವೆಗೆಂದೇ ಮುಡಿಪಾಗಿರುಸಿತ್ತಿದ್ದರು ಅನ್ನೂ ಮಾತು ಕೇಳಿದ್ದೇವೆ. ಆದ್ರಲ್ಲಿ ಲೀಸಾ ಮತ್ತು ಟೈನಿ ಎಂಬ ಎರಡು ಶ್ವಾನಗಳ ಸಂಪೂರ್ಣ ಸಂತತಿಯೇ ದೇಶ ಮತ್ತು ರಾಜ್ಯದ ಸೇವೆಗೆ ಮುಡಿಪಾಗಿರಿಸಿವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶ್ವಾನ ಮರಿಗಳು ಇದೀಗ ಭಾರತೀಯ ಸೈನ್ಯ ಸೇರಿವೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ರವರ ಮನೆಯಲ್ಲಿ ಸಾಕಿರುವ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ಶ್ವಾನಗಳು ಸೇನೆ ಸೇರಿವೆ. ಇವರ ಬಳಿ ಕೆ.ಎಫ್ ಎಂಬ ಹೆಸರಿನ ನಾಲ್ಕು ವರ್ಷದ ಗಂಡು ಶ್ವಾನ, ಡೆವಿಲ್ ಎನ್ನುವ ಎರಡೂವರೆ ವರ್ಷದ ಗಂಡು ಶ್ವಾನ, ಲೀಸಾಹಾಗೂ ಟೈನಿ ಎನ್ನುವ ಮೂರು ವರ್ಷದ ಶ್ವಾನಗಳನ್ನು ಹವ್ಯಾಸಕ್ಕಾಗಿ ಸಾಕಿದ್ದಾರೆ. ಆದ್ರೆ ಲೀಸಾ ಹಾಗೂ ಟೈನಿ ಮರಿ ಹಾಕಿದಾಗ ಇವುಗಳ ಮರಿಗಳು ರಾಜ್ಯ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಗೊಂಡವು. ಇದರ ನಂತರ ಮೂರು ತಿಂಗಳ ಹಿಂದೆ ಲೀಸಾ 10 ಮರಿಗಳಿಗೆ ಜನ್ಮ ನೀಡಿದರೇ ಟೈನಿ ಎಂಟು ಮರಿಗೆ ಜನ್ಮ ನೀಡಿತ್ತು.

ಇವುಗಳ ಮರಿಗಳ ಪೋಟೋಗಳನ್ನ ರಾಘವೇಂದ್ರ ಭಟ್ ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದನ್ನು ಗಮನಿಸಿದ ಸೈನಿಕ ದಳದ ಅಧಿಕಾರಿಯೊಬ್ಬರು ಇವರನ್ನು ಸಂಪರ್ಕಿಸಿ ಸೈನ್ಯಕ್ಕೆ ಶ್ವಾನದ ಮರಿಗಳ ಬೇಡಿಕೆ ಇಟ್ಟಿದ್ದಾರೆ. ನಂತರ ತಮ್ಮ ಅಧಿಕಾರಿಯನ್ನು ಅಸ್ಸಾಂ ನಿಂದ ಅಂಕೋಲಕ್ಕೆ ಕಳುಹಿಸಿ ಶ್ವಾನದ ಸಾಮರ್ಥ್ಯ, ಬುದ್ಧಿಮಟ್ಟ, ಆರೋಗ್ಯ ಪರೀಕ್ಷಿಸಿ ಇವುಗಳ ಆಹಾರ ಪದ್ದತಿಯನ್ನು 45 ದಿನಗಳ ಕಾಲ ಪರೀಕ್ಷಿಸಿ ಸೈನ್ಯಕ್ಕೆ ಪಡೆದುಕೊಳ್ಳಲು ಒಪ್ಪಿಗೆ ಸೂಚಿಸಿ ಮೂರು ತಿಂಗಳ ವಿಶೇಷ ನಿಗಾದೊಂದಿಗೆ ಅಸ್ಸಾಂನ ಸೈನಿಕ ತರಬೇತಿ ಕೇಂದ್ರಗಳಿಗೆ 17 ಶ್ವಾನಗಳನ್ನು ಕಳುಹಿಸಿಕೊಡಲಾಗಿದೆ.