Loan repayment: ಕೋಲಾರ ಜಿಲ್ಲೆಯಲ್ಲಿ ಸಾಲ ಪಡೆದ ಮಹಿಳೆಯರು ಮರುಪಾವತಿ ಮಾಡದಿರಲು ಶಪಥಗೈದಂತಿದೆ!

Loan repayment: ಕೋಲಾರ ಜಿಲ್ಲೆಯಲ್ಲಿ ಸಾಲ ಪಡೆದ ಮಹಿಳೆಯರು ಮರುಪಾವತಿ ಮಾಡದಿರಲು ಶಪಥಗೈದಂತಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 17, 2023 | 12:06 PM

ವಸೂಲಾತಿಗೆ ತೆರಳಿದ್ದ ಡಿಸಿಸಿ ಬ್ಯಾಂಕ್ ಅಧಿಕಾರಿ ತಿರುಮಲೇಶ್ ಗೌಡ ಮತ್ತು ಸಿಬ್ಬಂದಿಯನ್ನು ಮಹಿಳೆಯರು ಅಕ್ಷರಶಃ ಗ್ರಾಮದಿಂದ ಹೊರಗಟ್ಟಿದ ಘಟನೆ ನಡೆದಿದೆ.

ಕೋಲಾರ: ಈ ದೃಶ್ಯಗಳು ದಿನಗಳೆದಂತೆ ಸಾಮಾನ್ಯವಾಗುತ್ತಿವೆ ಅದರಲ್ಲೂ ವಿಶೇಷವಾಗಿ ಕೋಲಾರ ಜಿಲ್ಲೆಯಲ್ಲಿ (Kolar district) ಮಹಿಖೆಯರಿಗೆ ಸಾಲ ನೀಡಿದ ಮೈಕ್ರೋ ಹಣಕಾಸು ಸಂಸ್ಥೆ ಮತ್ತು ಡಿಸಿಸಿ ಬ್ಯಾಂಕ್ (DCC bank) ಸಿಬ್ಬಂದಿಗೆ ಅದನ್ನು ವಸೂಲಿ ಮಾಡುವುದು ಅಕ್ಷರಶಃ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಸಾಲ ಪಡೆದಿರುವ ಮಹಿಳೆಯರು ಬ್ಯಾಂಕ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವ, ಕಟ್ಟಿಹಾಕುವ ಪ್ರಸಂಗಗಳು ನಡೆಯುತ್ತಿವೆ. ಜಿಲ್ಲೆಯ ಮಾಲೂರು ತಾಲ್ಲೂಕಿನ ರಾಚೇನಹಳ್ಳಿಯಲ್ಲಿ ಸಂಭವಿಸಿದ ಘಟನೆ ವಿಡಿಯೋ ಇಂದು ಲಭ್ಯವಾಗಿದೆ. ಸುತಾರಾಂ ಸಾಲ ಕಟ್ಟೋದಿಲ್ಲ, ಸಿದ್ದರಾಮಯ್ಯ (CM Siddaramaiah) ಮನ್ನಾ ಮಾಡುವುದಾಗಿ ಹೇಳಿದ್ದಾರೆ ಅಂತ ಸಾಲ ಪಡೆದ ಮಹಿಳೆಯರು ಹೇಳುತ್ತಿದ್ದಾರೆ. ವಸೂಲಾತಿಗೆ ತೆರಳಿದ್ದ ಡಿಸಿಸಿ ಬ್ಯಾಂಕ್ ಅಧಿಕಾರಿ ತಿರುಮಲೇಶ್ ಗೌಡ (Tirumalesh Gowda) ಮತ್ತು ಸಿಬ್ಬಂದಿಯನ್ನು ಮಹಿಳೆಯರು ಅಕ್ಷರಶಃ ಗ್ರಾಮದಿಂದ ಹೊರಗಟ್ಟಿದ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ