Video: ಬಿಹಾರದಲ್ಲಿ 25 ಸಾವಿರ ರೂ. ಕೊಟ್ರೆ ಹುಡ್ಗೀರು ಸಿಗ್ತಾರೆ, ಕೋಲಾಹಲ ಸೃಷ್ಟಿಸಿದ ಸಚಿವೆ ರೇಖಾ ಆರ್ಯ ಪತಿಯ ಹೇಳಿಕೆ
ಬಿಹಾರದಲ್ಲಿ 20 ರಿಂದ 25 ಸಾವಿರ ರೂ. ಕೊಟ್ಟರೆ ಹುಡುಗಿಯರು ಸಿಗ್ತಾರೆ ಎನ್ನುವ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರ ಹೇಳಿಕೆ ತೀವ್ರ ಕೋಲಾಹಲ ಸೃಷ್ಟಿಸಿದೆ. ಉತ್ತರಾಖಂಡ ರಾಜಕೀಯ ಮತ್ತೊಮ್ಮೆ ಗೊಂದಲಮಯವಾಗಿದೆ.ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಉತ್ತರಾಖಂಡ, ಜನವರಿ 04: ಬಿಹಾರದಲ್ಲಿ 20 ರಿಂದ 25 ಸಾವಿರ ರೂ. ಕೊಟ್ಟರೆ ಹುಡುಗಿಯರು ಸಿಗ್ತಾರೆ ಎನ್ನುವ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರ ಹೇಳಿಕೆ ತೀವ್ರ ಕೋಲಾಹಲ ಸೃಷ್ಟಿಸಿದೆ. ಉತ್ತರಾಖಂಡ ರಾಜಕೀಯ ಮತ್ತೊಮ್ಮೆ ಗೊಂದಲಮಯವಾಗಿದೆ.ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ, ಗಿರ್ಧಾರಿ ಲಾಲ್ ಸಾಹು ಮದುವೆ ಆಗದಿದ್ದರೆ ಬಿಹಾರದಿಂದ 20,000-25,000 ರೂಪಾಯಿಗಳಿಗೆ ಹುಡುಗಿಯರು ಸಿಗ್ತಾರೆ ಖರೀದಿಸಿ ಎಂದು ಹೇಳುತ್ತಿರುವುದನ್ನು ಕೇಳಬಹುದು. ಅಂಕಿತಾ ಭಂಡಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಬಿಜೆಪಿ ಸರ್ಕಾರ ಈಗಾಗಲೇ ವಿರೋಧ ಪಕ್ಷಗಳಿಂದ ದಾಳಿಗೊಳಗಾಗಿದೆ.ಸಚಿವೆಯ ಪತಿಯ ಹೇಳಿಕೆ ಹೊಸ ವಿವಾದವನ್ನು ಹುಟ್ಟುಹಾಕಿದೆ.
ಹೆಚ್ಚುತ್ತಿರುವ ವಿವಾದದ ನಡುವೆ, ಗಿರ್ಧಾರಿ ಲಾಲ್ ಸಾಹು ಅವರು ವೀಡಿಯೊ ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಿದರು. ತಮ್ಮ ಹೇಳಿಕೆಯನ್ನು ತಿರುಚಲಾಗುತ್ತಿದೆ ಎಂದು ಅವರು ಹೇಳಿದರು.ಸಾಹು ಅವರ ಪ್ರಕಾರ, ಅವರು ಸ್ನೇಹಿತನ ಮದುವೆಗೆ ಸಂಬಂಧಿಸಿದ ಘಟನೆಯನ್ನು ವಿವರಿಸುತ್ತಿದ್ದರು ಮತ್ತು ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

