ನಿನ್ನನ್ನು ಮಂತ್ರಿ ಮಾಡಿದ್ದೇ ನಾನು ಅನ್ನೋದೇ ಮರೆತೆಯೇನಪ್ಪ ವಿಶ್ವನಾಥ? ವಿ ಶ್ರೀನಿವಾಸ ಪ್ರಸಾದ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 16, 2022 | 3:23 PM

ಅವರ ಪತ್ನಿ ನಾನು ಮಾಡಿದ ಸಹಾಯವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ, ಆದರೆ ವಿಶ್ವನಾಥ್ ಗೆ ಪತ್ನಿಗಿರುವಷ್ಟು ತಿಳಿವಳಿಕೆ ಕೂಡ ಇಲ್ಲ ಎಂದು ಪ್ರಸಾದ್ ವ್ಯಂಗ್ಯವಾಡಿದರು.

ಮೈಸೂರು: ಬಿಜೆಪಿಯ ಇಬ್ಬರು ವರಿಷ್ಠ ನಾಯಕರು ಹೆಚ್ ವಿಶ್ವನಾಥ್ (H Vishwanath) ಮತ್ತು ವಿ ಶ್ರೀನಿವಾಸ ಪ್ರಸಾದ್ (V Srinivas Prasad) ನಡುವೆ ಕೋಳಿ ಜಗಳ ಮುಂದುವರಿದಿದೆ ಮಾರಾಯ್ರೇ. ಗುರುವಾರ ಮೈಸೂರಲ್ಲಿ ವಿಶ್ವನಾಥ್ ಅವರು ಸುದ್ದಿಗೋಷ್ಟಿಯೊಂದನ್ನು ನಡೆಸಿ ಪ್ರಸಾದ್ ಅವರ ಮೇಲೆ ಹರಿಹಾಯ್ದಿದಿದ್ದರು. ಅದಕ್ಕೆ ಪ್ರತಿಯಾಗಿ ಸಂಸದ ಪ್ರಸಾದ್, ಇದು ಮೈಸೂರಲ್ಲೇ ಮಾಧ್ಯಮದವರ ಜೊತೆ ಮಾತಾಡಿ ವಿಧಾನ ಪರಿಷತ್ ಸದಸ್ಯನನ್ನು ಹಳಿದರು. ವೀರಪ್ಪ ಮೊಯ್ಲಿ (Veerappa Moily) ಸಚಿವ ಸಂಪುಟದಲ್ಲಿ ವಿಶ್ವನಾಥ್ ರನ್ನು ಮಂತ್ರಿ ಮಾಡಿದ್ದೇ ನಾನು, ಅದನ್ನೆಲ್ಲ ಅವರು ಮರೆತಿದ್ದಾರೆ. ಅವರ ಪತ್ನಿ ನಾನು ಮಾಡಿದ ಸಹಾಯವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ, ಆದರೆ ವಿಶ್ವನಾಥ್ ಗೆ ಪತ್ನಿಗಿರುವಷ್ಟು ತಿಳಿವಳಿಕೆ ಕೂಡ ಇಲ್ಲ ಎಂದು ಪ್ರಸಾದ್ ವ್ಯಂಗ್ಯವಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ