IND vs ENG: ಏಕಾಂಗಿಯಾದ ವೈಭವ್ ಸೂರ್ಯವಂಶಿ ವಿಡಿಯೋ ವೈರಲ್

Updated on: Jul 11, 2026 | 10:14 PM

Vaibhav Sooryavanshi Dropped: ಇಂಗ್ಲೆಂಡ್ ವಿರುದ್ಧದ ಐದನೇ T20 ಪಂದ್ಯದಿಂದ ವೈಭವ್ ಸೂರ್ಯವಂಶಿಯನ್ನು ಕೈಬಿಡಲಾಗಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಕೇವಲ 14, 13, 15 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ತಂಡದಿಂದ ಹೊರಬಿದ್ದು ಬೌಂಡರಿ ಬಳಿ ವೈಭವ್ ಏಕಾಂಗಿಯಾಗಿ ಕುಳಿತಿದ್ದ ವಿಡಿಯೋ ವೈರಲ್ ಆಗಿದ್ದು, ಅವರ ಮುಖದಲ್ಲಿನ ನಿರಾಶೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸೌತಾಂಪ್ಟನ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಐದನೇ ಟಿ20 ಪಂದ್ಯದಿಂದ ವೈಭವ್ ಸೂರ್ಯವಂಶಿಯನ್ನು ಹೊರಗಿಡಲಾಗಿದೆ. ಈ ಸರಣಿಯ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ವೈಭವ್​ಗೆ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 13 ಮತ್ತು 15 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಅವರನ್ನು ಕೊನೆಯ ಟಿ20 ಪಂದ್ಯದಿಂದ ಕೈಬಿಡಲಾಗಿದೆ. ಹೀಗೆ ತಂಡದಿಂದ ಹೊರಬಿದ್ದು, ಬೌಂಡರಿ ಗೆರೆ ಬಳಿ ವೈಭವ್ ಏಕಾಂಗಿಯಾಗಿ ಕುಳಿತಿದ್ದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈಭವ್ ಅವರ ಮುಖದಲ್ಲಿ ಬೇಸರ ಹಾಗೂ ಹತಾಶೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸ್ವಲ್ಪ ಹೊತ್ತು ಬೇಸರದಿಂದ ಕುಳಿತಿದ್ದ ವೈಭವ್ ಅದಾದ ಬಳಿಕ ಸಪ್ಪೆ ಮೊರೆ ಹಾಕಿಕೊಂಡು ಮೈದಾನದಿಂದ ಹೊರನಡೆದಿದ್ದಾರೆ.

Follow Us