AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ 20 ಅಡಿ ಆಳದ ಚರಂಡಿಗೆ ಬಿದ್ದು, ಓರ್ವ ಸಾವು

Video: ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ 20 ಅಡಿ ಆಳದ ಚರಂಡಿಗೆ ಬಿದ್ದು, ಓರ್ವ ಸಾವು

ನಯನಾ ರಾಜೀವ್
|

Updated on: Aug 21, 2025 | 11:12 AM

Share

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಜಟ್ವಾಲ್ ಪ್ರದೇಶದಲ್ಲಿ ಮಾತಾ ವೈಷ್ಣೋದೇವಿ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಒಂದು ಟೈರ್ ಸ್ಫೋಟಗೊಂಡು 20 ಅಡಿ ಆಳದ ಚರಂಡಿಗೆ ಉರುಳಿ ಬಿದ್ದಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬಸ್​​ನಲ್ಲಿ 40 ಮಂದಿ ಇದ್ದರು ಎನ್ನಲಾಗಿದೆ. ಸಾಂಬಾ ಜಿಲ್ಲೆಯ ಜಟ್ವಾಲ್ ಎಂಬ ಗ್ರಾಮದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 21: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಜಟ್ವಾಲ್ ಪ್ರದೇಶದಲ್ಲಿ ಮಾತಾ ವೈಷ್ಣೋದೇವಿ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಒಂದು ಟೈರ್ ಸ್ಫೋಟಗೊಂಡು 20 ಅಡಿ ಆಳದ ಚರಂಡಿಗೆ ಉರುಳಿ ಬಿದ್ದಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬಸ್​​ನಲ್ಲಿ 70 ಮಂದಿ ಇದ್ದರು ಎನ್ನಲಾಗಿದೆ. 40 ಮಂದಿ ಗಾಯಗೊಂಡಿದ್ದಾರೆ.  ಸಾಂಬಾ ಜಿಲ್ಲೆಯ ಜಟ್ವಾಲ್ ಎಂಬ ಗ್ರಾಮದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಉತ್ತರ ಪ್ರದೇಶದಿಂದ ಕತ್ರಾದಲ್ಲಿರುವ ಮಾತಾ ವೈಷ್ಣೋ ದೇವಿಗೆ ಬರುತ್ತಿದ್ದ ಬಸ್‌ನಲ್ಲಿ 65 ರಿಂದ 70 ಭಕ್ತರು ತುಂಬಿದ್ದರು. ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಉಳಿದವರೆಲ್ಲರೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ