ವಂಟಮೂರಿ ಘಟನೆ ತಲೆ ತಗ್ಗಿಸುವಂತೆ ಮಾಡಿದೆ, ನೊಂದ ಮಹಿಳೆಗೆ ಸರ್ಕಾರದಿಂದ ಎಲ್ಲ ನೆರವು: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ನೊಂದ ಮಹಿಳೆಯರಿಗೆ ನೆರವಾಗುವ ಸಖಿ ವನ್ ಸ್ಟಾಪ್ ಸಂಸ್ಥೆಯೇ ವಂಟಮೂರಿ ನೊಂದ ಮಹಿಳೆಯ ಪ್ರಕರಣವನ್ನು ಕೈಗೆತ್ತಿಕೊಂಡು ಕಾನೂನು ಹೋರಾಟ ನಡೆಸುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ನೊಂದ ಮಹಿಳೆಯನ್ನು ತಾನು ಪುನಃ ಭೇಟಿಯಾಗುತ್ತೇನೆ ಮತ್ತು ಅವರಿಗೆ ಸಂಪೂರ್ಣ ನ್ಯಾಯ ಸಿಗುವವರೆಗೆ ಸರ್ಕಾರವೇ ಅವರ ಜೊತೆಗಿರುತ್ತದೆ ಎಂದು ಸಚಿವೆ ಹೇಳಿದರು.

ವಂಟಮೂರಿ ಘಟನೆ ತಲೆ ತಗ್ಗಿಸುವಂತೆ ಮಾಡಿದೆ, ನೊಂದ ಮಹಿಳೆಗೆ ಸರ್ಕಾರದಿಂದ ಎಲ್ಲ ನೆರವು: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ
|

Updated on: Dec 11, 2023 | 7:26 PM

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಂಟಮೂರಿ ಗ್ರಾಮದಲ್ಲಿ ನಿನ್ನೆ ರಾತ್ರಿ ಅಮಾನವೀಯ ದೌರ್ಜನ್ಯಕ್ಕೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ (district hospital) ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯನ್ನು ಭೇಟಿಯಾಗಿ ಸಾಂತ್ವನ ಹೇಳಿ ಸರ್ಕಾರ ಅವರೊಂದಿಗೆ ಎಲ್ಲ ರೀತಿಯ ನೆರವಿಗೆ ಸಿದ್ಧವಿದೆ ಅಂತ ವಿಶ್ವಾಸ ತುಂಬಿದರು. ಘಟನೆಗೆ ಸಂಬಂಧಿಸಿದಂತೆ 7 ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ ಮತ್ತು ಅವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕೆಂದು ಗೃಹ ಸಚಿವರನ್ನು (home minister) ಒತ್ತಾಯಿಸುವುದಾಗಿ ಸಚಿವೆ ಹೆಬ್ಬಾಳ್ಕರ್ ಹೇಳಿದರು. ಅವರು ಚೇತರಿಸಿಕೊಳ್ಳಲು ಸಮಯ ಹಿಡಿಯಲಿದೆ, ನಮಗೆ ಬೇಕಿರುವ ಸಮಾಜ ಇದಲ್ಲ ಎಂದು ಲಕ್ಷ್ಮಿ ಹೇಳಿದರು. ತಮ್ಮ ತಾಲ್ಲೂಕಿನಲ್ಲಿ ನಡೆದಿರುವ ಈ ಘಟನೆ ತಲೆತಗ್ಗಿಸುವಂಥದ್ದು, ಅತ್ಯಂತ ನೋವಿನ ಮತ್ತು ಖೇದಕರ ಸಂಗತಿ ಎಂದು ಹೇಳಿದ ಅವರು ಮಹಿಳೆ ತೀವ್ರ ಘಾಸಿಗೊಳಗಾಗಿದ್ದಾರೆ, ಹೆಣ್ಣು ಮಕ್ಕಳು ಮಾನಸಿಕವಾಗಿ ಸದೃಢರಾಗಿದ್ದರೂ ಶಾರೀರಿಕವಾಗಿ ದುರ್ಬಲರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us