ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ವಧು-ವರರ ಪ್ರಿ ವೆಡ್ಡಿಂಗ್- ಪೋಸ್ಟ್ ವೆಡ್ಡಿಂಗ್ನ ಡಿಫರೆಂಟ್ ಕಾನ್ಸೆಪ್ಟ್ಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು ಪೂಜಾ ನವಜೋಡಿಗಳು ವಿಭಿನ್ನವಾಗಿ ಮದುವೆ ಮನೆಗೆ ಬಂದಿದ್ದಾರೆ. ಅಲ್ಲದೆ ಕಲ್ಯಾಣ ಮಂಟಪದ ವೇದಿಕೆ ಮೇಲೆ ನವಜೋಡಿಗಳ ಕೋಳಿ ಪೈಟ್ ಕೂಡ ನಡೆದಿದೆ.
ಉಡುಪಿ, ಡಿಸೆಂಬರ್ 11: ವಧು-ವರರ ಪ್ರಿ ವೆಡ್ಡಿಂಗ್- ಪೋಸ್ಟ್ ವೆಡ್ಡಿಂಗ್ನ ಡಿಫರೆಂಟ್ ಕಾನ್ಸೆಪ್ಟ್ಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು ಪೂಜಾ ಅವರ ಮದುವೆ (Marriage) ಸಮಾರಂಭ ನಡೆಯಿತು. ಮದುವೆ ಸಮಾರಂಭದಲ್ಲಿ ನವಜೋಡಿಗಳ ಗೆಳೆಯರು ವಧು-ವರನಿಗೆ ಡಿಫರೆಂಟ್ ಕಾನ್ಸೆಪ್ಟ್ಗಳನ್ನು ಅರೇಂಜ್ ಮಾಡಿದ್ದರು. ವರ ಮತ್ತು ವಧು ಜೆಸಿಬಿಯಲ್ಲಿ ಮದುವೆ ಹಾಲ್ಗೆ ಬಂದು ಗಮನ ಸೆಳೆದರು. ಜೆಸಿಬಿಯನ್ನು ಹೂವಿನಿಂದ ಸಿಂಗಾರ ಮಾಡಿ, ಸ್ಪೆಷಲ್ ಸೋಫಾವನ್ನು ಜೊಡಿಸಿ ಅದರಲ್ಲಿ ವರ-ವಧು ಕುಳಿತು ಮದುವೆ ಹಾಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟಕ್ಕೆ ಮುಗಿದಿಲ್ಲ, ಮದುವೆ ಮಂಟಪದಲ್ಲಿ ಮದುಮಗ ಮತ್ತು ಮದುಮಗಳಿಗೆ ಕೋಳಿ ಅಂಕದ ಪ್ರಾತ್ಯಕ್ಷಿಕೆ ನಡೆದಿದೆ. ಮಿಥುನ್ ಮತ್ತು ಪೂಜಾ ಅಂಕದ ಕೋಳಿಗಳನ್ನು ಫೈಟ್ ಮಾಡಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.