Daily Devotional: ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ಮನೆ ನಿರ್ಮಾಣದಲ್ಲಿ ಮೆಟ್ಟಿಲುಗಳ ಕೆಳಗೆ ಶೌಚಾಲಯ ನಿರ್ಮಿಸುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂದು ಗುರೂಜಿ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಇದರಿಂದ ದಾರಿದ್ರತೆ, ಮಾನಸಿಕ ಅಶಾಂತಿ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಮೆಟ್ಟಿಲುಗಳ ಕೆಳಗೆ ಖಾಲಿ ಜಾಗವನ್ನು ಬಿಡುವುದು ಅಥವಾ ಸಸ್ಯಗಳನ್ನು ನೆಡುವುದು ಶುಭಕರ.
ಬೆಂಗಳೂರು, ಆಗಸ್ಟ್ 02: ಮನೆ ಕಟ್ಟುವಾಗ, ಮೆಟ್ಟಿಲುಗಳ ಕೆಳಗೆ ಶೌಚಾಲಯ ನಿರ್ಮಿಸುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಸ್ಥಳದಲ್ಲಿ ಶೌಚಾಲಯ ಇರುವುದರಿಂದ ಮನೆಯ ಆಯುಷ್ಯ ಕಡಿಮೆಯಾಗಬಹುದು. ಜೊತೆಗೆ ಹಣಕಾಸಿನ ಸಮಸ್ಯೆಗಳು, ಮಾನಸಿಕ ಅಶಾಂತಿ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಾಯುವ್ಯ ಅಥವಾ ಅಗ್ನಿ ದಿಕ್ಕಿನಲ್ಲಿ ಮೆಟ್ಟಿಲುಗಳ ಕೆಳಗೆ ಶೌಚಾಲಯವಿರುವುದು ಹೆಚ್ಚು ಪ್ರತಿಕೂಲಕರ. ಈ ಸ್ಥಳವನ್ನು ಖಾಲಿ ಬಿಡುವುದು ಅಥವಾ ಸಸ್ಯಗಳನ್ನು ನೆಡುವುದು ಉತ್ತಮ. ಹಳೆಯ ಅಥವಾ ಉಪಯೋಗಿಸದ ವಸ್ತುಗಳನ್ನು ಇಲ್ಲಿ ಇಡುವುದು ಸಹ ಒಳ್ಳೆಯದಲ್ಲ.
Published on: Aug 02, 2025 06:57 AM