Vastu Tips: ಮನೆಯಲ್ಲಿ ಕನ್ನಡಿ ಯಾವ ದಿಕ್ಕಿಗೆ ಇರಬೇಕು ಗೊತ್ತಾ?
ವಾಸ್ತು ಶಾಸ್ತ್ರದಲ್ಲಿ ನಂಬಲಾಗುವಂತೆ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಿ, ಸಂಪತ್ತನ್ನು ಆಕರ್ಷಿಸುತ್ತದೆಂದು ಹೇಳಲಾಗುತ್ತದೆ. ಬನ್ನಿ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಅನೇಕ ಮಾಹಿತಿಯನ್ನು ನೀಡಿದ್ದಾರೆ.
ಮನೆಯಲ್ಲಿ ಏನಿಲ್ಲದಿದ್ದರೂ ಕನ್ನಡಿ (Mirror) ಮಾತ್ರ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಬೆಳಗೆದ್ದು ರಡಿಯಾಗಿ ಆಚೆ ಕಾಲಿಡೋಕು ಮುನ್ನ ಕನ್ನಡಿ ಅಪ್ಪಣೆ ಬೇಕೇಬೇಕು. ಹೇಗೆ ಕಾಣ್ತಿದ್ದೀವಿ, ಬಟ್ಟೆ ಸರಿ ಇದೆಯಾ ಎಂದು ಕನ್ನಡಿಯನೊಮ್ಮೆ ನೋಡಿಯೇ ಮನೆಯಿಂದ ಆಚೆ ಕಾಲಿಡೋದು. ವಾಸ್ತು ಶಾಸ್ತ್ರದಲ್ಲಿ ಕನ್ನಡಿಗೆ ಬಹಳಷ್ಟು ಮಹತ್ವವನ್ನು ನೀಡಲಾಗುತ್ತದೆ (Vastu Tips). ಕನ್ನಡಿ ಬರಿ ಮುಖ ನೋಡಿಕೊಳ್ಳಲು ಮಾತ್ರ ಎಂದು ನಾವು ತಿಳಿದಿದ್ದೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡುವ ಕನ್ನಡಿ ನಮ್ಮ ಮೇಲೂ ಪ್ರಭಾವ ಬೀರುತ್ತದೆ.
ಕನ್ನಡಿ ಎಂದರೆ ಮುಖ ನೋಡಿಕೊಳ್ಳಲು ಮಾತ್ರ ಎಂಬ ಭಾವನೆ ಕೆಲವರಿಗಿರಬಹುದು. ಆದರೆ ಮನೆಯಲ್ಲಿ ಇಡುವಂತಹ ಪುಟ್ಟ ಕನ್ನಡಿಯೂ ಕೂಡ ಮನೆ, ಜೀವನದ ಬದಲಾವಣೆಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ನಂಬಲಾಗುವಂತೆ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಿ, ಸಂಪತ್ತನ್ನು ಆಕರ್ಷಿಸುತ್ತದೆಂದು ಹೇಳಲಾಗುತ್ತದೆ. ಬನ್ನಿ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಅನೇಕ ಮಾಹಿತಿಯನ್ನು ನೀಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ