Vasuki Vaibhav: ವಾಸುಕಿ ವೈಭವ್​-ಬೃಂದಾ ವಿಕ್ರಮ್​ ಮದುವೆ ವಿಡಿಯೋ; ಇಲ್ಲಿದೆ ತಾಳಿ ಕಟ್ಟಿದ ಖುಷಿಯ ಕ್ಷಣ..

|

Updated on: Nov 16, 2023 | 2:33 PM

Vasuki Vaibhav Wedding Video: ಬಹುಕಾಲದ ಗೆಳೆತಿ ಬೃಂದಾ ವಿಕ್ರಮ್​ ಜೊತೆ ವಾಸುಕಿ ವೈಭವ್​ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಈ ಸೆಲೆಬ್ರಿಟಿ ವಿವಾಹಕ್ಕೆ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಹಾಜರಿ ಹಾಕಿದ್ದಾರೆ. ವಾಸುಕಿ ವೈಭವ್​ ಅವರು ತಾಳಿ ಕಟ್ಟಿದ ಶುಭ ಸಂದರ್ಭದ ವಿಡಿಯೋ ಲಭ್ಯವಾಗಿದೆ. ನವ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರದಲ್ಲಿ ವಾಸುಕಿ ವೈಭವ್​ ಅವರ ಮದುವೆ (Vasuki Vaibhav Marriage) ಇಂದು (ನವೆಂಬರ್​ 16) ನೆರವೇರಿದೆ. ಕನ್ನಡ ಚಿತ್ರರಂಗದಲ್ಲಿ ಗೀತ ಸಾಹಿತಿಯಾಗಿ, ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಹಾಗೂ ನಟನಾಗಿ ಖ್ಯಾತಿ ಪಡೆದಿರುವ ಅವರು ಬಹುಕಾಲದ ಗೆಳೆತಿ ಬೃಂದಾ ವಿಕ್ರಮ್​ (Brunda Vikram) ಜೊತೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಈ ಸೆಲೆಬ್ರಿಟಿ ವಿವಾಹಕ್ಕೆ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಹಾಜರಿ ಹಾಕಿದ್ದಾರೆ. ಹಲವು ವರ್ಷಗಳಿಂದ ವಾಸುಕಿ ವೈಭವ್​ (Vasuki Vaibhav) ಮತ್ತು ಬೃಂದಾ ವಿಕ್ರಮ್​ ಅವರು ಪ್ರೀತಿಸುತ್ತಿದ್ದರು. ಈಗ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಹಸೆಮಣೆ ಏರಿದ ಈ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ವಾಸುಕಿ ವೈಭವ್​ ಅವರು ತಾಳಿ ಕಟ್ಟಿದ ಶುಭ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಆ ಖುಷಿಯ ಕ್ಷಣ ಹೇಗಿತ್ತು ನೋಡಿ..

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.