ಸ್ತ್ರೀ ಶಕ್ತಿ, ಗೃಹಲಕ್ಷ್ಮೀ ಎಲ್ಲ ಗ್ಯಾರೆಂಟಿ ಮಹಿಳೆಯರಿಗೆ; ಪುರುಷರಿಗೆ ಯಾಕೆ ಇಲ್ಲ-ವಾಟಾಳ್​

Edited By: ಕಿರಣ್ ಹನುಮಂತ್​ ಮಾದಾರ್

Updated on: Jan 07, 2024 | 5:52 PM

ಪದವೀಧರರಿಗೆ ನಿಮ್ಮ ದುಡ್ಡು ಬೇಡ, ಬದಲಾಗಿ ಉದ್ಯೋಗ ನೀಡಿ. ವರ್ಷಕ್ಕೆ ಎಷ್ಟು ಜನ ಪದವೀಧರರಾಗುತ್ತಿದ್ದಾರೆ ಎಂಬ ಮಾಹಿತಿ ಇದೆಯೇ?, ಪದವೀಧರರ ಸಮಸ್ಯೆ ಆಲಿಸಲು ಓರ್ವ ಸಚಿವರನ್ನ ನೇಮಕ ಮಾಡಿ ಎಂದರು. ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್​ ನೀಡಿರುವ ಸ್ತ್ರೀ ಶಕ್ತಿ, ಗೃಹಲಕ್ಷ್ಮೀ ಎಲ್ಲ ಗ್ಯಾರೆಂಟಿಗಳು ಮಹಿಳೆಯರಿಗೆಯೇ ಇವೆ. ಆದರೆ, ಪುರುಷರಿಗೆ ಯಾಕೆ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಪ್ರಶ್ನಿಸಿದ್ದಾರೆ.​

ಮೈಸೂರು, ಜ.07: ಉದ್ಯೋಗಕ್ಕಾಗಿ ಮತ್ತು ಹಿಂದಿ ಹೇರಿಕೆ ವಿರೋಧಿಸಿ ಮೈಸೂರಿನ(Mysore) ಜಯಚಾಮರಾಜೇಂದ್ರ ವೃತ್ತದಲ್ಲಿ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಈ ವೇಳೆ ಮಾತನಾಡಿದ ಅವರು ‘ಪದವೀಧರರಿಗೆ ಮೂರು ಸಾವಿರ, ಡಿಪ್ಲೋಮ ಪದವೀಧರರಿಗೆ ಒಂದೂವರೆ ಸಾವಿರ ಭಿಕ್ಷೆಯ ರೂಪದಲ್ಲಿ ನೀಡುತ್ತಿದ್ದೀರಾ?, ಪದವೀಧರರಿಗೆ ನಿಮ್ಮ ದುಡ್ಡು ಬೇಡ, ಬದಲಾಗಿ ಉದ್ಯೋಗ ನೀಡಿ. ವರ್ಷಕ್ಕೆ ಎಷ್ಟು ಜನ ಪದವೀಧರರಾಗುತ್ತಿದ್ದಾರೆ ಎಂಬ ಮಾಹಿತಿ ಇದೆಯೇ?, ಪದವೀಧರರ ಸಮಸ್ಯೆ ಆಲಿಸಲು ಓರ್ವ ಸಚಿವರನ್ನ ನೇಮಕ ಮಾಡಿ ಎಂದರು. ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್​ ನೀಡಿರುವ ಸ್ತ್ರೀ ಶಕ್ತಿ, ಗೃಹಲಕ್ಷ್ಮೀ ಎಲ್ಲ ಗ್ಯಾರೆಂಟಿಗಳು ಮಹಿಳೆಯರಿಗೆಯೇ ಇವೆ. ಆದರೆ, ಪುರುಷರಿಗೆ ಯಾಕೆ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಪ್ರಶ್ನಿಸಿದ್ದಾರೆ.​

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More