ಪದವೀಧರರಿಗೆ ಸರ್ಕಾರ ಹಣದ ಬದಲು ಉದ್ಯೋಗ ನೀಡಲಿ: ವಾಟಾಳ್ ನಾಗರಾಜ್

ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ನಿರುದ್ಯೋಗಿ ಪದವೀಧರರಿಗೆ ಮೂರು ಸಾವಿರ ರೂಪಾಯಿ ನೀಡುವ ಯುವನಿಧಿ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರ ಪದವೀಧರರಿಗೆ ಹಣದ ಬದಲು ಉದ್ಯೋಗ ನೀಡಿಲಿ ಎಂದು ಒತ್ತಾಯಿಸಿದ್ದಾರೆ.

ಪದವೀಧರರಿಗೆ ಸರ್ಕಾರ ಹಣದ ಬದಲು ಉದ್ಯೋಗ ನೀಡಲಿ: ವಾಟಾಳ್ ನಾಗರಾಜ್
ಪದವೀಧರರಿಗೆ ಸರ್ಕಾರ ಹಣದ ಬದಲು ಉದ್ಯೋಗ ನೀಡಿಲಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ವಾಟಾಳ್ ನಾಗರಾಜ್
Follow us
ರಾಮ್​, ಮೈಸೂರು
| Updated By: Rakesh Nayak Manchi

Updated on: Jan 07, 2024 | 2:46 PM

ಮೈಸೂರು, ಜ.7: ರಾಜ್ಯ ಸರ್ಕಾರ ಪದವೀಧರರಿಗೆ ಹಣದ ಬದಲು ಉದ್ಯೋಗ ನೀಡಿಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಒತ್ತಾಯಿಸಿದ್ದಾರೆ. ಕನ್ನಡಿಗರಿಗೆ ಉದ್ಯೋಗಕ್ಕಾಗಿ ಮತ್ತು ಹಿಂದಿ ಹೇರಿಕೆ ವಿರೋಧಿಸಿ ಮೈಸೂರಿನ (Mysuru) ಜಯಚಾಮರಾಜೇಂದ್ರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉದ್ಯೋಗದಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿದರು.

ಹೋಟೆಲ್​ನಲ್ಲಿ ಕಾಫಿ, ಟೀ, ತಿಂಡಿ, ದೋಸೆ ಬೆಲೆಯೇ 150 ರೂಪಾಯಿ ಆಗಿದೆ. ನೀವು ಕೊಡುವ ದುಡ್ಡಿನಲ್ಲಿ ಅವರು ಕಾಫಿ ಕುಡಿಯಲು ಯೋಚನೆ ಮಾಡಬೇಕಾಗುತ್ತದೆ. ಮೂರು ಸಾವಿರ, ಒಂದೂವರೆ ಸಾವಿರ ನೀಡುವ ಮೂಲಕ ಪದವೀಧರರಿಗೆ ಅಗೌರವ ತೋರಲಾಗುತ್ತಿದೆ. ವರ್ಷಕ್ಕೆ ಎಷ್ಟು ಜನ ಪದವೀಧರರಾಗುತ್ತಿದ್ದಾರೆ ಎಂಬ ಮಾಹಿತಿ ಇದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಇದನ್ನೂ ಓದಿ: ನಾಮಫಲಕಗಳಲ್ಲಿ ಶೇ 60% ಕನ್ನಡ ಕಡ್ಡಾಯಕ್ಕೆ ಸುಗ್ರಿವಾಜ್ಞೆ ಹೊರಡಿಸಿದ ರಾಜ್ಯ ಸರ್ಕಾರ

ಪದವೀಧರರ ಸಮಸ್ಯೆ ಆಲಿಸಲು ಓಬ್ಬ ಸಚಿವರನ್ನ ನೇಮಕ ಮಾಡಿ. ಉನ್ನತ ಶಿಕ್ಷಣ ಮಾಡಲು ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಮಠಾಧೀಶರ ಕಾಲೇಜುಗಳಲ್ಲಿ ಹೊರಗಿನ ರಾಜ್ಯದವರಿಗೆ ಸೀಟು ಕೊಟ್ಟಿದ್ದೀರಿ. ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ಕನ್ನಡ ಬೋರ್ಡ್​​ಗಾಗಿ ಹೋರಾಟ ಮಾಡಬೇಕಾದ ಸ್ಥಿತಿ

ರಾಜ್ಯದಲ್ಲಿ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ವಿಚಾರವಾಗಿ ಮಾತನಾಡಿದ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧನ ಮಾಡಬಾರದಾಗಿತ್ತು. ಸರ್ಕಾರ ಬಂಧನ ಮಾಡಿದೆ, ಆದರೆ ಕೋರ್ಟ್​ ಬಿಡುಗಡೆ ಮಾಡುತ್ತಿದೆ. ಕನ್ನಡ ಬೋರ್ಡ್ ಹಾಕಿ ಅಂತಾ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೆ, ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ