ಮೈಸೂರಿನಲ್ಲಿ ಮಹಿಳೆಯರ ರಕ್ಷಣೆಗೆ ನಿಂತ ಚಾಮುಂಡಿ; ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ

ಮೈಸೂರು ಅರಮನೆ ಕೋಟೆ ಆಂಜನೇಯ ದೇಗುಲ ಬಳಿ ಮೈಸೂರು ನಗರ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮ ಆಯೋಜಿಸಿ ಮಹಿಳೆಯರ ಸುರಕ್ಷತೆಗಾಗಿ ಸುರಕ್ಷಾ ಪಡೆ ವಾಹನಗಳಿಗೆ ಚಾಲನೆ ನೀಡಿದೆ .ಮಹಿಳೆಯರ ಸುರಕ್ಷತೆ ಕಾಪಾಡಲು ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನ ರಸ್ತೆಗಿಳಿದಿದೆ.

ಮೈಸೂರಿನಲ್ಲಿ ಮಹಿಳೆಯರ ರಕ್ಷಣೆಗೆ ನಿಂತ ಚಾಮುಂಡಿ; ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ
ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು
Follow us
ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Jan 06, 2024 | 1:09 PM

ಮೈಸೂರು, ಜ.06: ಮೈಸೂರಿನಲ್ಲಿ ಮಹಿಳೆಯರ ಸುರಕ್ಷತೆ (Women Safty) ಕಾಪಾಡಲು ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ ನೀಡಲಾಗಿದೆ. ಅರಮನೆ ನಗರಿಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರ ಶೋಷಣೆಗಳನ್ನು ನಿಯಂತ್ರಿಸಿ ಅವರ ರಕ್ಷಣೆಗಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ನಗರ ಪೊಲೀಸ್​​​ ಆಯುಕ್ತ ರಮೇಶ್​​ ಬಾನೊತ್ (Ramesh Banoth)​​ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ DCP ಜಾಹ್ನವಿ, ಹಿರಿಯ ಪೊಲೀಸ್​​ ಅಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಮೈಸೂರು ಅರಮನೆ ಕೋಟೆ ಆಂಜನೇಯ ದೇಗುಲ ಬಳಿ ಮೈಸೂರು ನಗರ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮ ಆಯೋಜಿಸಿ ಮಹಿಳೆಯರ ಸುರಕ್ಷತೆಗಾಗಿ ಸುರಕ್ಷಾ ಪಡೆ ವಾಹನಗಳಿಗೆ ಚಾಲನೆ ನೀಡಿದೆ .ಮಹಿಳೆಯರ ಸುರಕ್ಷತೆ ಕಾಪಾಡಲು ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನ ರಸ್ತೆಗಿಳಿದಿದೆ.

ಈ ಹಿಂದೆ ಹೊಸ ವರ್ಷದ ಸಮಯದಲ್ಲಿ ಮಹಿಳೆಯರ ಹಿತದೃಷ್ಟಿಯಿಂದ ಮೈಸೂರು ನಗರದಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಎಂಟು ಚಾಮುಂಡಿ ಪಡೆ (ಸುರಕ್ಷತಾ ಪಿಂಕ್‌ ಗರುಡಾ) ರಚಿಸಲಾಗಿತ್ತು. ಈ ಮೂಲಕ ಯುವತಿಯರಿಗೆ ಕೀಟಲೆ ಮಾಡುವ ಪುಂಡರ ಹೆಡೆಮುರಿ ಕಟ್ಟಲಾಗಿತ್ತು.

ಹೊಸ ವರ್ಷ ಆಚರಣೆ ವೇಳೆ ಮೈಸೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಹಿಳೆಯರ ರಕ್ಷಣೆ ದೃಷ್ಟಿಯಿಂದ ಚಾಮುಂಡಿ ಪಡೆ ಕಾರ್ಯ ನಿರ್ವಹಿಸಿತ್ತು. ಇದೀಗ ಇದೇ ನಿಟ್ಟಿನಲ್ಲಿ ಮಹಿಳೆಯರ ರಕ್ಷಣೆಗಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಗದಗ: ತೆಪ್ಪದ ಮೂಲಕ ಮರಳು ಲೂಟಿ, ಕಾನೂನು ಸಚಿವರ ತವರಲ್ಲೇ ಮಂಗಮಾಯವಾದ ಕಾನೂನು!

ಮಾಡೆಲ್ ಹತ್ಯೆ ಪತ್ತೆಯಾಗದ ಶವ

ಗುರುಗ್ರಾಮದ ಹೋಟೆಲ್​ವೊಂದರಲ್ಲಿ ಹತ್ಯೆಯಾಗಿದ್ದ ಮಾಡೆಲ್ ಪಹುಜಾ ಪ್ರಕರಣದ ತನಿಖೆ ತೀವ್ರ ಗೊಂಡಿದೆ. ಆದ್ರೆ, ಕೊಲೆಯಾಗಿ ನಾಲ್ಕು ದಿನ ಕಳೆದರೂ ದಿವ್ಯಾ ಮೃತದೇಹ ಪತ್ತೆಯಾಗಿಲ್ಲ. ಗುರುಗ್ರಾಮ್ ಹೋಟೆಲ್​ನಲ್ಲಿ, ಹೋಟೆಲ್ ಮಾಲೀಕನಿಂದ್ಲೇ ಹತ್ಯೆಯಾದ ಮಾಡೆಲ್ ದಿವ್ಯಾ ಪಹುಜಾ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ತನಿಖೆಗಾಗಿ ಡಿಸಿಪಿ ವಿಜಯ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ದಿವ್ಯಾ ಪಹುಜಾ ಒಂದು ಕಾಲದ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಅವರ ಮಾಜಿ ಪ್ರೇಯಸಿ. ಈಕೆಗೆ 18 ವರ್ಷ ಇದ್ದಾಗಲೇ ಅಂಡರ್​ವಲ್ಡ್​ ನಂಟು ಇತ್ತು.

2016ರಲ್ಲಿ ಕೇಸ್ ವೊಂದರ ಸಂಬಂಧ ದಿವ್ಯಾಳನ್ನ ಪೊಲೀಸರು ಬಂಧಿಸಿದ್ರು. ಈ ವೇಳೆ ದಿವ್ಯಾ ಸಂದೀಪ್ ಅಡಗುದಾಣವನ್ನ ತೋರಿಸಿದ್ಲು. ಬಳಿಕ ಪೊಲೀಸರು ಸಂದೀಪ್​ನನ್ನ ಎನ್​ಕೌಂಟರ್ ಮಾಡಿದ್ರು. ಜನವರಿ 2 ರಂದು ದಿವ್ಯಾಳನ್ನ ಗುರುಗ್ರಾಮದ ಹೋಟೆಲ್​ವೊಂದರ ಮಾಲೀಕ ಅಭಿಜಿತ್ ಸಿಂಗ್ ಗುಂಡಿಕ್ಕಿ ಹತ್ಯೆಗೈದು, ಶವವನ್ನ ಬಿಎಂಡಬ್ಲ್ಯು ಕಾರಿನಲ್ಲಿ ಒಯ್ದು ಸುಮಾರು 280 ಕಿಲೋ ಮೀಟರ್ ದೂರ ಸಾಗಿಸಿದ್ದ. ಪಟಿಯಾಲದ ಬಳಿ ನದಿಯಲ್ಲಿ ಎಸೆದಿದ್ದ. ದಿವ್ಯಾ, ಅಭಿಜಿತ್​ನ ಖಾಸಗಿ ಚಿತ್ರ& ವಿಡಿಯೋಗಳನ್ನ ತೋರಿಸಿ ಆತನಿಗೆ ಬೆದರಿಕೆ ಹಾಕಿದ್ದಳು. ಹಣ ಸುಲಿಗೆ ಮಾಡ್ತಿದ್ದಳು. ಹೀಗಾಗಿ ದಿವ್ಯಾಳನ್ನ ಹತ್ಯೆ ಮಾಡಿರೋದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ದಿವ್ಯಾಳ ಶವಕ್ಕಾಗಿ ಹುಡುಕಾಟ ನಡೆಸ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್