ಮೈಸೂರು: ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ಮತ್ತು ಚಾಮರಾಜನಗರದ (Chamarajanagar) ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ (Vatal Nagaraj) ತಮ್ಮ ಪ್ರತಿಸ್ಪರ್ಧಿ ವಿ ಸೋಮಣ್ಣ (V Somanna) ವಿರುದ್ಧ ಕಿಡಿಕಾರಿದ್ದಾರೆ. ಸೋಮಣ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿ ಇಬ್ಬರೂ ಚಾಮರಾಜನಗರದಲ್ಲಿ ಮತದಾನದ ಹಿಂದಿನ ದಿನ ಬೆಳಗಿನ ಜಾವ ಮೂರು ಗಂಟೆಯವರೆಗೂ ದುಡ್ಡು ಹಂಚಿದ್ದಾರೆ, ಹಾಗಾಗಿ ಅವರಿಬ್ಬರ ಅಭ್ಯರ್ಥಿತ್ವವನ್ನು ಅನರ್ಹಗೊಳಿಸಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು. ತಾನು ಆರಂಭದಿಂದಲೂ ಹೋರಾಟ ಮಾಡಿಕೊಡು ಬಂದಿರುವುದಾಗಿ ಹೇಳಿದ ನಾಗರಾಜ್ ಕರ್ನಾಟಕದಲ್ಲಿ ಒಬ್ಬ ಹೋರಾಟಗಾರನೆಂದು ಗುರುತಿಸಿಕೊಂಡಿರುವುದಾಗಿ ಹೇಳಿದರು. ತಾನು ಈ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ನಾಗರಾಜ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ