Karnataka Assembly Polls: ಸ್ನೇಹಿತರೊಂದಿಗೆ ಯೋಗಿಕೊಳ್ಳಕ್ಕೆ ತೆರಳಿ ದಣಿವಾರಿಸಿಕೊಂಡ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ
ಯಮಕನಮರಡಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ತಮ್ಮ ಆಪ್ತರು ಮತ್ತು ಸ್ನೇಹಿತರ ಜೊತೆ ಯೋಗಿಕೊಳ್ಳಕ್ಕೆ ತೆರಳಿ ಜಾಲಿಯಾಗಿ ಸಮಯ ಕಳೆದರು.
ಬೆಳಗಾವಿ: ಏಪ್ರಿಲ್ ಮತ್ತು ಮೇ ತಿಂಗಳ ಪ್ರಖರ ಬಿಸಿಲಲ್ಲಿ ಚುನಾವಣಾ ಪ್ರಚಾರ ನಡೆಸಿ ಬಸವಳಿದಿರುವ ರಾಜಕೀಯ ನಾಯಕರು ತಮ್ಮದೇ ಆದ ರೀತಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಯಮಕನಮರಡಿ (Yamakanamaradi) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ (Satish Jarkiholi) ತಮ್ಮ ಆಪ್ತರು ಮತ್ತು ಸ್ನೇಹಿತರ ಜೊತೆ ಯೋಗಿಕೊಳ್ಳಕ್ಕೆ (Yogi Kolla) ತೆರಳಿ ಜಾಲಿಯಾಗಿ ಸಮಯ ಕಳೆದರು. ಈ ಸ್ಥಳ ಅತ್ಯಂತ ರಮಣೀಯವಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಸತೀಶ್, ಹರಿಯುತ್ತಿರುವ ಹಳ್ಳದ ಮೇಲ್ಭಾಗದಲ್ಲಿರುವ ಸ್ಥಳದಲ್ಲಿ ಒಂದು ಕಟ್ಟೆಯ ಮೇಲೆ ಕೂತು ತಿಂಡಿ ಸವಿಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos