ದೆಹಲಿ ನಾಯಕರಿಂದ ಕನ್ನಡ ಮಾತಾಡಿಸುವ ಹುಚ್ಚು ಸಾಹಸ ಮಾಡದಿರುವಂತೆ ಸ್ಥಳೀಯ ನಾಯಕರನ್ನು ಆಗ್ರಹಿಸಿದ ವಾಟಾಳ್ ನಾಗರಾಜ್

Arun Kumar Belly

|

Updated on: Mar 01, 2023 | 5:45 PM

ಹಿಂದೆ ದಿವಂಗತ ರಾಜೀವ್ ಗಾಂಧಿಯವರು ಮೈಸೂರಿಗೆ ಬಂದಾಗ ಕನ್ನಡ ತಾಯಿ ಬದಲು ಕನ್ನಡ ತೈ ಅಂದಿದ್ದರು ಎಂದು ನಾಗರಾಜ್ ಹೇಳಿದರು.

ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ದೆಹಲಿಯ ನಾಯಕರು ಕನ್ನಡ ನಾಡಿಗೆ ಬಂದಾಗ ಜನರಮ್ಮು ಇಂಪ್ರೆಸ್ ಮಾಡಲು ತಪ್ಪುತಪ್ಪಾಗಿ ಕನ್ನಡ ಮಾತಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಬೆಂಗಳೂರಲ್ಲಿಂದು ಮಾಮದವರೊಡನೆ ಮಾತಾಡಿದ ನಾಗರಾಜ್ ಅವರು ಸೋಮವಾರದಂದು ಶಿವಮೊಗ್ಗದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕನ್ನಡದಲ್ಲಿ ಮಾತಾಡಿದ ಶೈಲಿಯನ್ನು ಅಣಕಿಸಿದರು. ದೆಹಲಿಯಿಂದ ಬರುವ ನಾಯಕರಿಗೆ ಕೇವಲ ಜನರನ್ನು ಪ್ರಭಾವಕ್ಕೊಳಪಡಿಸಲು ಕನ್ನಡದ ಎರಡು ಸಾಲು ಬರೆದುಕೊಟ್ಟು ಭಾಷೆಯ ಕೊಲೆ ಮಾಡಬೇಡಿ ಎಂದು ಅವರು ಎಲ್ಲ ಪಕ್ಷಗಳ ಸ್ಥಳೀಯ ನಾಯಕರನ್ನು ಆಗ್ರಹಿಸಿದರು. ಹಿಂದೆ ದಿವಂಗತ ರಾಜೀವ್ ಗಾಂಧಿಯವರು (late Rajiv Gandhi) ಮೈಸೂರಿಗೆ ಬಂದಾಗ ಕನ್ನಡ ತಾಯಿ ಬದಲು ಕನ್ನಡ ತೈ ಅಂದಿದ್ದರು ಎಂದು ನಾಗರಾಜ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada