Prajadhvani Yatre: ಬಡವರು ಹಾಲು ಮೊಸರಿನ ಮೇಲೆ ಜಿಎಸ್ ಟಿ ಕೊಡ್ತಾರೆ; ಪ್ರಧಾನಿ ಮೋದಿ ರೂ. 8,000 ಕೋಟಿ ವಿಮಾನದಲ್ಲಿ ಓಡಾಡುತ್ತಾರೆ: ಸತೀಶ್ ಜಾರಕಿಹೊಳಿ
ಜನರಿಗೆ ಬರೀ ಸುಳ್ಳುಗಳನ್ನು ಹೇಳಿ ಬಿಜೆಪಿ ಸರ್ಕಾರ ನಡೆಸುತ್ತಿದೆ, ಮೋದಿಯವರ ಬುಲೆಟ್ ಟ್ರೇನ್ ಬಗ್ಗೆ 9 ವರ್ಷದಿಂದ ಕೇಳಿತ್ತಿದ್ದೇವೆ, ಅದರೆ ಅದು ಇನ್ನೂ ಅಹ್ಮದಾಬಾದ್ ಸ್ಟೇಷನ್ ನಲ್ಲೇ ನಿಂತಿದೆ ಎಂದು ಸತೀಶ್ ವ್ಯಂಗ್ಯವಾಡಿದರು.
ಬೆಳಗಾವಿ: ಸಿದ್ದರಾಮಯ್ಯ (Siddaramaiah) ನೇತೃತ್ವದ ಪ್ರಜಾಧ್ವನಿ ಯಾತ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರ ತಲುಪಿದೆ. ತಾಲ್ಲೂಕಿನ ಪಂಥಬಾಳೆಕುಂದ್ರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಶಾಸಕ ಸತೀಶ್ ಜಾರಕೊಹೊಳಿ (Satish Jarkiholi) ಅವರು ಪ್ರಧಾನ ಮಂತ್ರಿ ನರೇದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸಿದರು. ಹಾಲು ಮೊಸರು ಸೇರಿದಂತೆ ಬಡವರು ಖರೀದಿಸುವ ಎಲ್ಲ ವಸ್ತುಗಳ ಮೇಲೆ ಜಿಎಸ್ ಟಿ ಹೇರುವ ಪ್ರಧಾನಿ ಮೋದಿ ಅವರು ತಾವು ಮಾತ್ರ ಎಂಟು ಸಾವಿರ ಕೋಟಿ ರೂಪಾಯಿ ವಿಮಾನದಲ್ಲಿ ಹಾರಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಜನರಿಗೆ ಬರೀ ಸುಳ್ಳುಗಳನ್ನು ಹೇಳಿ ಬಿಜೆಪಿ ಸರ್ಕಾರ ನಡೆಸುತ್ತಿದೆ, ಮೋದಿಯವರ ಬುಲೆಟ್ ಟ್ರೇನ್ ಬಗ್ಗೆ 9 ವರ್ಷದಿಂದ ಕೇಳಿತ್ತಿದ್ದೇವೆ, ಅದರೆ ಅದು ಇನ್ನೂ ಅಹ್ಮದಾಬಾದ್ ಸ್ಟೇಷನ್ ನಲ್ಲೇ ನಿಂತಿದೆ ಎಂದು ಸತೀಶ್ ವ್ಯಂಗ್ಯವಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos