Chamarajanagar: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ವಾಹನ ಹೇಗಿದೆ ನೋಡಿದ್ದೀರಾ?

Chamarajanagar: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ವಾಹನ ಹೇಗಿದೆ ನೋಡಿದ್ದೀರಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 01, 2023 | 2:44 PM

ಒಳಗಡೆ ಬಿಜೆಪಿ ನಾಯಕರು ಕುಳಿತು ಚರ್ಚಿಸಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಾಹನದ ಟಾಪ್ ಮೇಲೆ ನಾಯಕರು ಜನರನ್ನು ಉದ್ದೇಶಿಸಿ ಮಾತಾಡಲು ಮೈಕ್ ಗಳ ವ್ಯವಸ್ಥೆ ಸಹ ಇದೆ.

ಚಾಮರಾಜನಗರ: ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ, ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗಳ ಹಾಗೇಯೇ ಬಿಜೆಪಿ ಇಂದಿನಿಂದ ಗಡಿ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ವಿಜಯ ಸಂಕಲ್ಪ ರಥಯಾತ್ರೆಯನ್ನು (Vijay Sankalp Yatre) ಆರಂಭಿಸಿದೆ. ಈ ವಾಹನದ ವಿನ್ಯಾಸ (design) ಹೇಗಿದೆ ಅದರಲ್ಲಿರುವ ಸೌಲಭ್ಯಗಳೇನು ಅಂತ ಟಿವಿ9 ಕನ್ನಡ ವಾಹಿನಿಯ ಚಾಮರಾಜನಗರ ವರದಿಗಾರ ವಿವರಿಸಿದ್ದಾರೆ. ವಾಹನ ಹೊರಭಾಗದಲ್ಲಿ ಬಿಜೆಪಿಯೇ ಭರವಸೆ, ಅಭಿವೃದ್ಧಿಗಾಗಿ ಡಬಲ್ ಎಂಜಿನ್ ಸರ್ಕಾರ (double engine government), ಈ ಬಾರಿ 150 ಗುರಿ ಮೊದಲಾದ ಘೋಷಣೆಗಳು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪೋಟೋಗಳನ್ನು ನೋಡಬಹುದು. ಒಳಗಡೆ ಬಿಜೆಪಿ ನಾಯಕರು ಕುಳಿತು ಚರ್ಚಿಸಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಾಹನದ ಟಾಪ್ ಮೇಲೆ ನಾಯಕರು ಜನರನ್ನು ಉದ್ದೇಶಿಸಿ ಮಾತಾಡಲು ಮೈಕ್ ಗಳ ವ್ಯವಸ್ಥೆ ಸಹ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ