Govt Employees Protest: ಶೇಕಡ 17 ವೇತನ ಹೆಚ್ಚಳ ಘೋಷಣೆ ಬಳಿಕ ಮುಷ್ಕರ ವಾಪಸ್ಸು ಪಡೆದ ಸರ್ಕಾರಿ ನೌಕರರು

Govt Employees Protest: ಶೇಕಡ 17 ವೇತನ ಹೆಚ್ಚಳ ಘೋಷಣೆ ಬಳಿಕ ಮುಷ್ಕರ ವಾಪಸ್ಸು ಪಡೆದ ಸರ್ಕಾರಿ ನೌಕರರು

TV9 Web
| Updated By: Digi Tech Desk

Updated on:Mar 01, 2023 | 2:13 PM

ಸರ್ಕಾರಿ ನೌಕರರು ತತ್​ಕ್ಷಣದಿಂದ ಮುಷ್ಕರ ವಾಪಸ್ಸು ಪಡೆದಿರುವ ಬಗ್ಗೆ ಸಂಘದ ಅದ್ಯಕ್ಷ ಷಡಕ್ಷರಿ ಬೆಂಗಳೂರಲ್ಲಿ ಘೋಷಣೆ ಮಾಡಿದ್ದಾರೆ. ವೇತನ ಹೆಚ್ಚಳ ಏಪ್ರಿಲ್ 2023 ರಿಂದ ಅನ್ವಯವಾಗಲಿದೆ.

ಬೆಂಗಳೂರು: ಇದು ಸರ್ಕಾರಿ ನೌಕರರ (government employees) ಗೆಲುವೋ ಅಥವಾ ಸರ್ಕಾರ ಅವರ ಮುಷ್ಕರ ಕೊನೆಗೊಳಿಸುವಲ್ಲಿ ಯಶ ಕಂಡಿತೋ ಅಂತ ಅರ್ಥವಾಗುತ್ತಿಲ್ಲ ಮಾರಾಯ್ರೇ. ಕಳೆದ ರಾತ್ರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ನಡೆದ ಸಭೆಯಲ್ಲೇ (meeting) ಸರ್ಕಾರ ಅವರ ವೇತನವನ್ನು ಶೇಕಡ 17 ರಷ್ಟು ಹೆಚ್ಚಿಸುವುದಾಗಿ ಹೇಳಿದ್ದರೆ ಪ್ರಾಯಶಃ ಇಂದು ಮುಷ್ಕರ ನಡೆಯುತ್ತಿರಲಿಲ್ಲ ಮತ್ತು ಜನಸಾಮಾನ್ಯರು ಕಷ್ಟಪಡುವ ಸ್ಥಿತಿ ಎದುರಾಗುತ್ತಿರಲಿಲ್ಲ. ಏನೇ ಆಗಲಿ, ದೇರ್ ಆಯೇ, ದುರುಸ್ತ್ ಆಯೇ ಅಂತ ಹಿಂದಿಯಲ್ಲಿ ಹೇಳುವ ಹಾಗೆ ಸರ್ಕಾರಕ್ಕೆ ಜ್ಞಾನೋದಯವಾಗಿದೆ ಮತ್ತು ಸರ್ಕಾರಿ ನೌಕರರು ಸಹ ತತ್​ಕ್ಷಣದಿಂದಮುಷ್ಕರ ವಾಪಸ್ಸು ಪಡೆದಿರುವ ಬಗ್ಗೆ ಸಂಘದ ಅದ್ಯಕ್ಷ ಷಡಕ್ಷರಿ (Shadakshari) ಬೆಂಗಳೂರಲ್ಲಿ ಘೋಷಣೆ ಮಾಡಿದ್ದಾರೆ. ವೇತನ ಹೆಚ್ಚಳ ಏಪ್ರಿಲ್ 2023 ರಿಂದ ಅನ್ವಯವಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 01, 2023 01:53 PM