ಅತ್ಯಂತ ಬಡ ಕುಟುಂಬದ ಯುವಕರು ಅಭಿಮಾನದ ಉತ್ಸಾಹದಲ್ಲಿ ಮೃತರಾಗಿರುವುದು ದುರ್ದೈವಕರ ಸಂಗತಿ: ಹೆಚ್ ಕೆ ಪಾಟೀಲ್, ಸಚಿವ

|

Updated on: Jan 08, 2024 | 12:58 PM

ದುರ್ಮರಕ್ಕೀಡಾದ ಯುವಕರ ಕುಟುಂಬಗಳಿಗೆ ಸರ್ಕಾರದಿಂದ ಏನಾದರೂ ಪರಿಹಾರ ಸಿಗಬಹುದೇ? ಪ್ರಾಣ ಕಳೆದುಕೊಂಡವರು ಮತ್ತು ಗಾಯಗೊಂಡವರು ಪರಿಶಿಷ್ಟ ವರ್ಗದ ಕಡುಬಡತನದ ಕುಟುಂಬಗಳಿಂದ ಬಂದವರು ಎಂದು ಹೇಳುವ ಸಚಿವ ಪಾಟೀಲ್, ಪರಿಹಾರದ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸುತ್ತೇನೆ ಅನ್ನುತ್ತಾರೆ.

ಬೆಂಗಳೂರು: ಸಿನಿಮಾ ನಟ ಯಶ್ (cine actor Yash) ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಕಟೌಟ್ ಕಟ್ಟುವಾಗ ವಿದ್ಯುತ್ ಕಂಬವೊಂದಕ್ಕೆ ಕಟೌಟ್ ನ ಪೋಲ್ ತಾಕಿದ್ದರಿಂದ ವಿದ್ಯುತ್ ಪ್ರವಹಿಸಿ ಮೂವರು ಯುವಕರು ದುರ್ಮಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ (district in charge minister) ಹೆಚ್ ಕೆ ಪಾಟೀಲ್ (HK Patil) ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸಚಿವ, ಅಭಿಮಾನದ ಉತ್ಸಾಹ ಮತ್ತು ಹುರುಪಿನಲ್ಲಿ ಮೂವರು ಯುವಕರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರ್ದೈವಕರ ಸಂಗತಿ. ಪ್ರಕರಣದಲ್ಲಿ ಇನ್ನೂ ಮೂವರು ಯುವಕರು ಗಾಯಗೊಂಡಿದ್ದು ಅವರನ್ನು ಲಕ್ಷ್ಮೇಶ್ವರದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರಲ್ಲೊಬ್ಬ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾನೆ ಅದರೆ ಉಳಿದಿಬ್ಬರ ಸ್ಥಿತಿ ಗಂಭೀರವಾಗಿರುವುದರಿಂದ ಗದಗ ಜಿಲ್ಲಾಸ್ಪತ್ರೆಗೆ (ಜಿಮ್ಸ್) ಸ್ಥಳಾಂತರಿಸಲಾಗಿದೆ ಎಂದು ಸಚಿವ ಹೇಳಿದರು. ವಿಷಯ ಗೊತ್ತಾದ ಕೂಡಲೇ ಜಿಲ್ಲಾಧಿಕಾರಿಗೆ ಫೋನ್ ಮಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಹೇಳಿದ ಪಾಟೀಲರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿರುವರೆಂದು ಹೇಳಿದರು.

ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on