ಜಯಮಾಲಾ ಮಗಳ ಹಳದಿಶಾಸ್ತ್ರ ಸಂಭ್ರಮ; ಸ್ಯಾಂಡಲ್ವುಡ್ ತಾರೆಯರು ಭಾಗಿ
ಹಿರಿಯ ನಟಿ ಜಯಮಾಲಾ ಮಗಳು ಸೌಂದರ್ಯ ಜಯಮಾಲಾ ಮದುವೆಗೆ ದಿನಗಣನೆ ಶುರುವಾಗಿದೆ. ಇದೆ ತಿಂಗಳ 7 ಮತ್ತು 8ರಂದು ವಿವಾಹ ನಡೆಯಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈಗಾಗಲೇ ಜಯಮಾಲಾ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ. ಈ ಕ್ಷಣದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
ಹಿರಿಯ ನಟಿ ಜಯಮಾಲಾ ಅವರ ಮಗಳು ಸೌಂದರ್ಯಾ ವಿವಾಹ ಫೆಬ್ರವರಿ 7 ಹಾಗೂ 8ರಂದು ಅದ್ದೂರಿಯಾಗಿ ಜರುಗಲಿದೆ. ಇಂದು (ಫೆಬ್ರವರಿ 5) ಅದ್ದೂರಿಯಾಗಿ ಹಳದಿ ಶಾಸ್ತ್ರ ನಡೆದಿದೆ. ನಗರದ ಲಲಿತ್ ಅಶೋಕ್ ಹೋಟೆಲ್ನಲ್ಲಿ ಹಳದಿ ಶಾಸ್ತ್ರ ಜರುಗಿದೆ. ಇದರಲ್ಲಿ ಸ್ಯಾಂಡಲ್ವುಡ್ ತಾರೆಯರು ಪಾಲ್ಗೊಂಡಿದ್ದರು. ಸುಧಾರಾಣಿ, ಶ್ರುತಿ, ಮಾಳವಿಕಾ ಮೊದಲಾದವರು ಭಾಗಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos