Video: ದಸರಾ ಹಬ್ಬಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಭಿನ್ನ ಪ್ರಯತ್ನ, ಇದು ಕನ್ನಡಿಗರಿಗೆ ಗೌರವ

Updated on: Oct 01, 2025 | 5:20 PM

ಈ ದಸರಾ ಹಬ್ಬಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಪ್ರಯತ್ನವನ್ನು ಮಾಡಿದೆ. ಈ ವಿಭಿನ್ನ ಪ್ರಯತ್ನದ ಮೂಲಕ ಕನ್ನಡದ ಗೌರವವನ್ನು ಹೆಚ್ಚಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ದೇಶ ವಿದೇಶದ ಪ್ರಯಾಣಿಕರ ಮೂಲಕ ಹೇಗೆ ದಸರಾ ಶುಭಾಶಯಗಳನ್ನು ತಿಳಿಸಿದ್ದಾರೆ ನೋಡಿ.

ಬೆಂಗಳೂರು, ಅ.1: ರಾಜ್ಯದಲ್ಲಿ ದಸರಾ ಹಬ್ಬ (Dasara festival) ಕಳೆಗಟ್ಟಿದೆ, ಅದರಲ್ಲೂ ಮೈಸೂರು ದಸರಾ ಇನ್ನು ವಿಶೇಷವಾಗಿದೆ. ಬೆಂಗಳೂರಿನಲ್ಲೂ ದಸರಾವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ಹಾಗೂ ರಾಷ್ಟ್ರದ ಜನರು ಇದ್ದಾರೆ. ಕೆಲವರಿಗೆ ಈ ದಸರಾ ಹೊಸದಾಗಿದ್ದರೆ. ಇನ್ನು ಕೆಲವರಿಗೆ ಕರ್ನಾಟಕದ ದಸರಾ ವಿಭಿನ್ನವಾಗಿರುತ್ತದೆ. ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda Airport in Bangalore) ಹೊಸ ಪ್ರಯತ್ನವೊಂದನ್ನು ಮಾಡಿದೆ. ದಸರಾಕ್ಕೆ ಶುಭಾಶಯವನ್ನು ಕನ್ನಡದಲ್ಲಿ ತಿಳಿಸುವ ಮೂಲಕ ಕನ್ನಡ ಅಸ್ಮಿತೆಯನ್ನು ಹೆಚ್ಚಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುವ ದೇಶ, ವಿದೇಶದ ಪ್ರಯಾಣಿಕರಿಂದ ಕನ್ನಡದಲ್ಲೇ ದಸರಾ ಶುಭಾಶಯಗಳನ್ನು ತಿಳಿಸುವ ಹೊಸ ಪ್ರಯತ್ನವನ್ನು ಮಾಡಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಕನ್ನಡಿಗರ ಮನಗೆದ್ದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ