Video: ಬಾಯಿ ತೆರೆದು ನಿದ್ದೆ ಮಾಡಿದ್ರೆ ಹೀಗೂ ಆಗಬಹುದು ಎಚ್ಚರ

|

Updated on: Nov 08, 2024 | 12:39 PM

ಮನೆಯ ಹೊರಗೆ ನಿದ್ರೆ ಮಾಡುತ್ತಿದ್ದ ಮಹಿಳೆಯ ಬಾಯಿಂದ 4 ಅಡಿ ಉದ್ದದ ಹಾವು ಒಳಗೆ ಹೋಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ಹಳ್ಳಿಯೊಂದರಲ್ಲಿ ಮನೆಯ ಹೊರಗೆ ಮಲಗಿದ್ದ ಮಹಿಳೆ ಬಾಯಿ ಕಳೆದುಕೊಂಡು ನಿದ್ರೆ ಮಾಡುತ್ತಿದ್ದರು. ಆಗ ಹಾವು ಒಳಗೆ ಹೋಗಿದೆ, ಬಳಿಕ ಆಕೆ ಅಸ್ವಸ್ಥಗೊಂಡಿದ್ದರು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ದೇಹದೊಳಗೆ ಏನೋ ಇದೆ ಎಂದು ಅರಿತ ವೈದ್ಯರು ಅನಸ್ತೇಶಿಯಾ ನೀಡಿ, ಬಾಯೊಳಗಿಂದ ಉಪಕರಣಗಳ ಸಹಾಯದಿಂದ ಹಾವನ್ನು ಹೊರ ತೆಗೆದು ಕಸದ ಬುಟ್ಟಿಗೆ ಎಸೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವು ಅನ್ನನಾಳದ ಬದಲು ಶ್ವಾಸಕೋಶಕ್ಕೆ ಹೋಗಿದ್ದರೆ, ಉಸಿರುಗಟ್ಟುವಿಕೆ ಮತ್ತು ಸಾವಿಗೆ ಕಾರಣವಾಗುತ್ತಿತ್ತು. ಅದೃಷ್ಟವಶಾತ್ ಆಕೆಗೇನೂ ಆಗಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ