ಪ್ರಿಯಾಂಕ್ ಖರ್ಗೆಗೆ ಜನರ ವಿರುದ್ಧ ಎಫ್ಐಅರ್ ಹಾಕಿಸುವುದೇ ಫುಲ್ಟೈಮ್ ಕೆಲಸ: ತೇಜಸ್ವೀ ಸೂರ್ಯ
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಪೊಲೀಸರನ್ನು ಹೆದರಿಸಿ ಬೆದರಿಸಿ ತನ್ನ ವಿರುದ್ಧ ಏಫ್ಐಅರ್ ಹಾಕಿಸಿರುವರೆಂದು ತೇಜಸ್ವೀ ಸೂರ್ಯ ಹೇಳುತ್ತಾರೆ. ಆದರೆ ಸಣ್ಣಪ್ಪನ ಕುಟುಂಬದವರು ಮಾಧ್ಯಮ ಮತ್ತು ತನ್ನನ್ನು ಭೇಟಿಯಾಗಿ ಅವರು ಸಾವಿಗೆ ಶರಣಾಗಿರುವುದನ್ನು ಖಚಿತಪಡಿಸಿದ ಬಳಿಕ ಈ ಎಪಿಸೋಡ್ ಗೆ ಹೊಸ ಟ್ವಿಸ್ಟ್ ಸಿಗುತ್ತದೆ ಎಂದು ಸಂಸದ ಹೇಳುತ್ತಾರೆ.
ಹುಬ್ಬಳ್ಳಿ: ತನ್ನ ವಿರುದ್ಧ ಎಫ್ಐಆರ್ ದಾಖಲಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಂಸದ ತೇಜಸ್ವೀ ಸೂರ್ಯ, ನಿನ್ನೆ ಜೆಪಿಸಿಯ ಚೇರ್ಮನ್ ಅವರ ಎದುರು ಹಾಜರಾಗಿ ರೈತ ಕುಟುಂಬವೊಂದು ತಮ್ಮ ಜಮೀನಿನನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ಸಂಗತಿಯನ್ನು ಹೇಳಿಕೊಳುತ್ತಾರೆ. ಕನ್ನಡದ ಆನ್ಲೈನ್ ಸುದ್ದಿವಾಹಿನಿಯೊಂದು ಇದೇ ಕುಟುಂಬದ ಸಣ್ಣಪ್ಪ ಹೆಸರಿನ ರೈತ ಸಾವಿಗೆ ಶರಣಾದ ವಿಷಯವನ್ನು ಬಿತ್ತರಮಾಡಿದ್ದನ್ನು ನೋಡಿ ಅದರ ಆಧಾರದ ಮೇಲೆ ತಾನೊಂದು ಟ್ವೀಟ್ ಮಾಡಿದಾಗ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡುತ್ತಾರೆ. ಆಗ ತಾನು ಟ್ವೀಟ್ ಅನ್ನು ಡಿಲೀಟ್ ಮಾಡಿರುವುದಾಗಿ ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ