ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್

|

Updated on: Oct 21, 2024 | 8:56 AM

ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸದ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ತಯಾರಿಸಿದ್ದಲ್ಲದೇ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡಿದರು.

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧವೂ ವಾಗ್ದಾಳಿ ನಡೆಸಿದರು. ನಗೆ ಫ್ರೆಂಚ್ ಫ್ರೈಸ್ ತುಂಬಾ ಇಷ್ಟ. ನನಗೂ ಇಲ್ಲಿ ಕೆಲಸ ಮಾಡುವುದು ತುಂಬಾ ಇಷ್ಟ. ನಾನು ಕಮಲಾ ಅವರಿಗಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ಕಮಲಾ ಹ್ಯಾರಿಸ್ ತನ್ನ ಚುನಾವಣಾ ಪ್ರಚಾರದಲ್ಲಿ, ತನ್ನ ಹಳೆಯ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾ, ವಾಷಿಂಗ್ಟನ್‌ನ ಹೊವಾರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ  ಮೆಕ್‌ಡೊನಾಲ್ಡ್‌ನಲ್ಲಿ ಫ್ರೈಸ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದರು.

ಆದರೆ ಹ್ಯಾರಿಸ್ ಎಂದಿಗೂ ಮೆಕ್‌ಡೊನಾಲ್ಡ್‌ನಲ್ಲಿ ಕೆಲಸ ಮಾಡಿಲ್ಲ ಎಂದು ಟ್ರಂಪ್ ಪದೇ ಪದೇ ಹೇಳಿದ್ದಾರೆ. ಟ್ರಂಪ್ ಫ್ರೈಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಮೆಕ್‌ಡೊನಾಲ್ಡ್‌ನ ಉದ್ಯೋಗಿಗಳೊಂದಿಗೆ ಮಾತನಾಡುತ್ತಿರುವ ಜೊತೆಗೆ ಫ್ರೈಗಳನ್ನು ತಯಾರಿಸುವುದನ್ನು ಕಾಣಬಹುದು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ