ವಿಡಿಯೋ: ಮೂರು ದಿನ ಸಿಗಲ್ಲ ಎಣ್ಣೆ: ಎದ್ನೋ ಬಿದ್ನೋ ಎಂಬಂತೆ ಬಾರ್​ಗೆ ಓಡಿದ ಮದ್ಯಪ್ರಿಯರು

Updated on: May 08, 2023 | 9:43 PM

ಮೂರು ದಿನ ಎಣ್ಣೆ ಸಿಗುವುದಿಲ್ಲ ಎಂಬ ವಿಷಯ ತಿಳಿದ ಮದ್ಯಪ್ರಿಯರು ಎದ್ನೋ ಬಿದ್ನೋ ಎಂಬಂತೆ ಬಾರ್​ಗಳ ಮುಂದೆ ಜಮಾಯಿಸಿದ್ದು, ಮದ್ಯ ಖರೀದಿಗೆ ಮುಗಿಬಿದಿದ್ದರು. ವಿಡಿಯೋ ನೋಡಿ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಸೋಮವಾರ ಸಂಜೆ 6 ಗಂಟೆಯಿಂದ ಮೇ 11 ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ (liquor) ಮಾರಟಕ್ಕೆ ನಿರ್ಬಂಧ ಹೇರಲಾಗಿದೆ. ಆ ಮೂಲಕ ಮೇ 8 , 9 , 10 ರಂದು ಡ್ರೈ ಡೇ ಆಚಾರಿಸುವಂತೆ ಮದ್ಯ ಮಾರಾಟದ ಅಂಗಡಿ ಮಾಲೀಕರಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಆದರೆ ಇದು ಮದ್ಯಪ್ರಿಯರಿಗೆ ತಲೆಬಿಸಿ ಆಗಿದೆ. ಮೂರು ದಿನ ಎಣ್ಣೆ ಸಿಗುವುದಿಲ್ಲ ಎಂಬ ವಿಷಯ ತಿಳಿದ ಮದ್ಯಪ್ರಿಯರು ಎದ್ನೋ ಬಿದ್ನೋ ಎಂಬಂತೆ ಬಾರ್​ಗಳ ಮುಂದೆ ಜಮಾಯಿಸಿದ್ದು, ಮದ್ಯ ಖರೀದಿಗೆ ಮುಗಿಬಿದಿದ್ದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More