Video: ವ್ಯಾನವಾಟುವಿನಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ

|

Updated on: Dec 17, 2024 | 11:05 AM

ದಕ್ಷಿಣ ಪೆಸಿಫಿಕ್ ಮಹಾಸಾಗರದ ವ್ಯಾನವಾಟು ಕರಾವಳಿಯಲ್ಲಿ ಮಂಗಳವಾರ 7.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ವನವಾಟುವಿನ ಅತಿದೊಡ್ಡ ನಗರವಾದ ಪೋರ್ಟ್ ವಿಲಾದಿಂದ ಪಶ್ಚಿಮಕ್ಕೆ 30 ಕಿಲೋಮೀಟರ್ ದೂರದಲ್ಲಿ 57 ಕಿಲೋಮೀಟರ್ ಆಳದಲ್ಲಿದೆ. ಅದೇ ಸ್ಥಳದ ಬಳಿ 5.5 ತೀವ್ರತೆಯ ನಂತರದ ಕಂಪನವೂ ಸಂಭವಿಸಿದೆ. ಭೂಕಂಪದಿಂದ ಎಷ್ಟು ಹಾನಿಯಾಗಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಭೂಕಂಪದ ತೀವ್ರತೆಯಿಂದಾಗಿ, ಭೂಕಂಪದ ನಂತರ ವ್ಯಾನವಾಟು ಸರ್ಕಾರದ ವೆಬ್‌ಸೈಟ್‌ಗಳನ್ನು ಮುಚ್ಚಲಾಯಿತು.

ದಕ್ಷಿಣ ಪೆಸಿಫಿಕ್ ಮಹಾಸಾಗರದ ವ್ಯಾನವಾಟು ಕರಾವಳಿಯಲ್ಲಿ ಮಂಗಳವಾರ 7.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ವ್ಯಾನವಾಟುವಿನ ಅತಿದೊಡ್ಡ ನಗರವಾದ ಪೋರ್ಟ್ ವಿಲಾದಿಂದ ಪಶ್ಚಿಮಕ್ಕೆ 30 ಕಿಲೋಮೀಟರ್ ದೂರದಲ್ಲಿ 57 ಕಿಲೋಮೀಟರ್ ಆಳದಲ್ಲಿದೆ. ಅದೇ ಸ್ಥಳದ ಬಳಿ 5.5 ತೀವ್ರತೆಯ ನಂತರದ ಕಂಪನವೂ ಸಂಭವಿಸಿದೆ.

ಭೂಕಂಪದಿಂದ ಎಷ್ಟು ಹಾನಿಯಾಗಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಭೂಕಂಪದ ತೀವ್ರತೆಯಿಂದಾಗಿ, ಭೂಕಂಪದ ನಂತರ ವ್ಯಾನವಾಟು ಸರ್ಕಾರದ ವೆಬ್‌ಸೈಟ್‌ಗಳನ್ನು ಮುಚ್ಚಲಾಯಿತು. ಪೊಲೀಸ್ ಮತ್ತು ಸಾರ್ವಜನಿಕ ಏಜೆನ್ಸಿಗಳ ಫೋನ್ ಸಂಖ್ಯೆಗಳು ಸಹ ಕಾರ್ಯನಿರ್ವಹಿಸುತ್ತಿಲ್ಲ. ಈ ಭೂಕಂಪವು ವ್ಯಾನವಾಟುಗೆ ದೊಡ್ಡ ನೈಸರ್ಗಿಕ ವಿಪತ್ತು ಎಂದು ಸಾಬೀತುಪಡಿಸುವ ಆತಂಕವಿದೆ.

ಈ ಭೂಕಂಪವು ವ್ಯಾನವಾಟುಗೆ ದೊಡ್ಡ ನೈಸರ್ಗಿಕ ವಿಪತ್ತು ಎಂದು ಸಾಬೀತುಪಡಿಸುವ ಆತಂಕವಿದೆ. ಡಿಸಾಸ್ಟರ್ ಡೈಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಕಾರುಗಳು ಗ್ಯಾರೇಜ್‌ನಲ್ಲಾದ ಕಂಪನವನ್ನು ಕಾಣಬಹುದು. ಲವೆಡೆ ಕಟ್ಟಡಗಳ ಕಿಟಕಿಗಳು ಮುರಿದು ಬಿದ್ದಿದ್ದು, ಕೆಲವು ಭಾಗಗಳು ಶಿಥಿಲಗೊಂಡಿರುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 17, 2024 11:04 AM