Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಉತ್ಸವದ ವೇಳೆ ಆನೆಯೊಂದು ಕೆರಳಿದ ಪರಿಣಾಮ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ತಿರೂರಿನಲ್ಲಿ ನಡೆದ ಪುತಿಯಂಗಡಿ ಉತ್ಸವದಲ್ಲಿ ನೂರಾರು ಮಂದಿ ನೆರೆದಿದ್ದರು. ಈ ಉತ್ಸವದಲ್ಲಿ ಐದು ಆನೆಗಳನ್ನು ಅಲಂಕರಿಸಲಾಗಿತ್ತು. ಗುಂಪಿನಲ್ಲಿದ್ದವರು ವಿಡಿಯೋ ಮಾಡಿಕೊಳ್ಳುತ್ತಿದ್ದರು, ಕೆಲವರು ಫೋಟೊ ತೆಗೆಯುತ್ತಿದ್ದರು. ಹಠಾತ್ತನೆ ಮಧ್ಯೆ ಇದ್ದ ಆನೆಯೊಂದು ಕೆರಳಿ ಜನರ ಕಡೆ ಧಾವಿಸಿ ಬಂದಿತ್ತು, ಮಾವುತ ಎಷ್ಟೇ ಕಷ್ಟಪಟ್ಟರು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಉತ್ಸವದ ವೇಳೆ ಆನೆಯೊಂದು ಕೆರಳಿದ ಪರಿಣಾಮ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ತಿರೂರಿನಲ್ಲಿ ನಡೆದ ಪುತಿಯಂಗಡಿ ಉತ್ಸವದಲ್ಲಿ ನೂರಾರು ಮಂದಿ ನೆರೆದಿದ್ದರು. ಈ ಉತ್ಸವದಲ್ಲಿ ಐದು ಆನೆಗಳನ್ನು ಅಲಂಕರಿಸಲಾಗಿತ್ತು. ಗುಂಪಿನಲ್ಲಿದ್ದವರು ವಿಡಿಯೋ ಮಾಡಿಕೊಳ್ಳುತ್ತಿದ್ದರು, ಕೆಲವರು ಫೋಟೊ ತೆಗೆಯುತ್ತಿದ್ದರು. ಹಠಾತ್ತನೆ ಮಧ್ಯೆ ಇದ್ದ ಆನೆಯೊಂದು ಕೆರಳಿ ಜನರ ಕಡೆ ಧಾವಿಸಿ ಬಂದಿತ್ತು, ಮಾವುತ ಎಷ್ಟೇ ಕಷ್ಟಪಟ್ಟರು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಓರ್ವ ವ್ಯಕ್ತಿಯನ್ನು ಸೊಂಡಿಲಿನಲ್ಲಿ ಎತ್ತಿ ಎಸೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಕೋಟಕ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ