Former MLA exposed: ಕೆಎಸ್ ಈಶ್ವರಪ್ಪರ ಸುಳ್ಳು ವಿಡಿಯೋದಿಂದ ಬಯಲಾಯಿತು, ಹುಬ್ಬಳ್ಳಿಯಲ್ಲೊಂದು ಮಾತು, ಬೆಂಗಳೂರಲ್ಲಿ ಮತ್ತೊಂದು!

|

Updated on: Jul 01, 2023 | 7:16 PM

ಹುಬ್ಬಳ್ಳಿಯಲ್ಲಿ ಮಾತಾಡಿದ್ದು ನಾನಲ್ಲ, ಇದು ಫೇಕ್ ವಿಡಿಯೋ ಅಂತ ಮಾತ್ರ ದಯವಿಟ್ಟು ಹೇಳಬೇಡಿ ಸಾರ್!

ಬೆಂಗಳೂರು: ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಎಷ್ಟು ಸಲೀಸಾಗಿ ಸುಳ್ಳು ಹೇಳುತ್ತಾರೆ ಮತ್ತು ಮಾಧ್ಯಮಗಳ ತಲೆ ಮೇಲೆ ಗೂಬೆ ಕೂರಿಸುತ್ತಾರೆ ಅಂತ ನೀವೇ ಕೇಳಿಸಿಕೊಳ್ಳ್ಳಿ. ಕೇವಲ ಒಂದೇ ವಾರದ ಹಿಂದೆ ತಾವು ಆಡಿದ ಮಾತಿಗೆ ಉಲ್ಟಾ ಹೊಡಿದ್ದಾರೆ. ಹುಬ್ಬಳ್ಳಿಯಲ್ಲಿ ಅವರು 26 ಜೂನ್ ರಂದು ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಅಶಿಸ್ತು (indiscipline) ಬರಲು ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಬಂದ ಶಾಸಕರು ಕಾರಣ ಅಂತ ಹೇಳಿದ್ದರು. ಅವರನ್ನು ಕರೆತಂದಿದ್ದಕ್ಕೆ ಅನನುಭವಿಸುತ್ತಿದ್ದೇವೆ ಅಂತಲೂ ಹೇಳಿದ್ದರು. ಆದರೆ ಇವತ್ತು ಬೆಂಗಳೂರಲ್ಲಿ ಟೋಪಿ ಧರಿಸಿ ಮಾತಾಡುವಾಗ ಮಾಧ್ಯಮದವರನ್ನೇ ಸುಳ್ಳು ಅಂತ ಬಿಂಬಿಸಲು ಪ್ರಯತ್ನಿಸಿದರು. ತಮ್ಮ ಸುಳ್ಳಿಗೆ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು (Pralhad Joshi) ಸಾಕ್ಷಿಯಾಗಿ ತರುತ್ತಾರೆ. ಯಾಕೆ ಸ್ವಾಮಿ? ಈ ವಿಡಿಯೋ ನೋಡಿ ಎಲ್ಲ ಅರ್ಥವಾಗುತ್ತದೆ. ಹುಬ್ಬಳ್ಳಿಯಲ್ಲಿ ಮಾತಾಡಿದ್ದು ನಾನಲ್ಲ, ಇದು ಫೇಕ್ ವಿಡಿಯೋ ಅಂತ ಮಾತ್ರ ದಯವಿಟ್ಟು ಹೇಳಬೇಡಿ ಸಾರ್!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ