Video: ಜಗನ್ಮೋಹನ್ ರೆಡ್ಡಿಯ ಭವ್ಯ ಬಂಗಲೆಯ ಒಳ-ಹೊರ ನೋಟ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಕಚೇರಿ ಮತ್ತು ನಿವಾಸವಾಗಿ ಕಾರ್ಯನಿರ್ವಹಿಸಲು ನಿರ್ಮಿಸಲಾದ ವೈಜಾಗ್‌ನ ರುಷಿಕೊಂಡ ಬೆಟ್ಟದ ಮೇಲೆ ಸಮುದ್ರಕ್ಕೆ ಎದುರಾಗಿರುವ ಭವ್ಯವಾದ ಬಂಗಲೆ ಈಗ ಚರ್ಚೆಯಲ್ಲಿದೆ. ಇದನ್ನು ಬರೋಬ್ಬರಿ 452 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಅರಮನೆಗೆ ಜಗನ್ ಪ್ಯಾಲೇಸ್ ಎಂದೇ ಕರೆಯಲಾಗ್ತಿದೆ. ಮನೆಯ ಪ್ರತಿಯೊಂದು ರೂಮ್, ಐಷಾರಾಮಿ ವಸ್ತುಗಳು ನಿಬ್ಬೆರಗಾಗಿಸುವಂತಿದೆ.
ಹೈದರಾಬಾದ್ , ಮಾರ್ಚ್ 14: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಕಚೇರಿ ಮತ್ತು ನಿವಾಸವಾಗಿ ಕಾರ್ಯನಿರ್ವಹಿಸಲು ನಿರ್ಮಿಸಲಾದ ವೈಜಾಗ್‌ನ ರುಷಿಕೊಂಡ ಬೆಟ್ಟದ ಮೇಲೆ ಸಮುದ್ರಕ್ಕೆ ಎದುರಾಗಿರುವ ಭವ್ಯವಾದ ಬಂಗಲೆ ಈಗ ಚರ್ಚೆಯಲ್ಲಿದೆ. ಇದನ್ನು ಬರೋಬ್ಬರಿ 452 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಅರಮನೆಗೆ ಜಗನ್ ಪ್ಯಾಲೇಸ್ ಎಂದೇ ಕರೆಯಲಾಗ್ತಿದೆ. ಮನೆಯ ಪ್ರತಿಯೊಂದು ರೂಮ್, ಐಷಾರಾಮಿ ವಸ್ತುಗಳು ನಿಬ್ಬೆರಗಾಗಿಸುವಂತಿದೆ.
ಪ್ರವಾಸಿ ಕೇಂದ್ರವಾದ ಋಷಿಕೊಂಡ ಪ್ರದೇಶದಲ್ಲಿ 10 ಎಕರೆ ಮತ್ತು ನಾಲ್ಕು ಬ್ಲಾಕ್‌ಗಳಲ್ಲಿ ಹರಡಿರುವ ಈ ಮಹಲಿನಲ್ಲಿರುವ ಇಟಾಲಿಯನ್ ಅಮೃತಶಿಲೆಯ ನೆಲಹಾಸು ಮತ್ತು ಬೆಲೆಬಾಳುವ ಪೀಠೋಪಕರಣಗಳು ಸೇರಿದಂತೆ ಐಷಾರಾಮಿ ಒಳಾಂಗಣಗಳನ್ನು ಹೊಂದಿದ್ದು ಈಗ ಮುನ್ನಲೆಗೆ ಬಂದಿದೆ. ಈ ಬಾತ್ ರೂಮ್ ಗಳಿಗೆ 40 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ತಲಾ 12 ಲಕ್ಷ ಮೌಲ್ಯದ ಕಮೋಡನ್ನು ಇದಕ್ಕೆ ಅಳವಡಿಸಲಾಗಿದೆ.
9.9 ಎಕರೆ ಜಾಗದಲ್ಲಿ ಇದರ ನಿರ್ಮಾಣವಾಗಿದೆ. ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನೆಯ ಬಾಲ್ಕನಿಯಲ್ಲಿ ನಿಂತ್ರೆ ನೀವು ಬೀಚ್ ಸೌಂದರ್ಯವನ್ನು ಸವಿಯಬಹುದು. ಸದ್ಯ ಆಂಧ್ರಪ್ರದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ರಾಜ್ಯದ ಆಂತರಿಕ ಉತ್ಪನ್ನಕ್ಕೆ ಸಾಲದ ಅನುಪಾತವು ತುಂಬಾ ಹೆಚ್ಚಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ