ಮಹಾರಾಷ್ಟ್ರ: ಅಜಿತ್ ಪವಾರ್ ಇದ್ದ ಹೆಲಿಕಾಪ್ಟರ್, ಬ್ಯಾಗ್‌ಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗದ ಅಧಿಕಾರಿಗಳು
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಾರಾಮತಿಗೆ ಆಗಮಿಸಿದಾಗ ಚುನಾವಣಾ ಅಧಿಕಾರಿಗಳು ಅವರ ಬ್ಯಾಗ್ ಹಾಗೂ ಹೆಲಿಕಾಪ್ಟರ್ನ್ನು ಪರಿಶೀಲಿಸಿದ್ದಾರೆ. ಕಾನೂನನ್ನು ಗೌರವಿಸೋಣ ಮತ್ತು ನಮ್ಮ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ಬೆಂಬಲಿಸೋಣ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಾರಾಮತಿಗೆ ಆಗಮಿಸಿದಾಗ ಚುನಾವಣಾ ಅಧಿಕಾರಿಗಳು ಅವರ ಬ್ಯಾಗ್ ಹಾಗೂ ಹೆಲಿಕಾಪ್ಟರ್ನ್ನು ಪರಿಶೀಲಿಸಿದ್ದಾರೆ. ಕಾನೂನನ್ನು ಗೌರವಿಸೋಣ ಮತ್ತು ನಮ್ಮ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ಬೆಂಬಲಿಸೋಣ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಮೊದಲು ಉದ್ಧವ್ ಠಾಕ್ರೆ ಅವರ ಬ್ಯಾಗ್‌ಗಳನ್ನು ಈ ರೀತಿ ಪರಿಶೀಲಿಸಿದ್ದಾಗ, ಚುನಾವಣಾ ಆಯೋಗವನ್ನು ಖಂಡಿಸಿದ್ದರು. ಠಾಕ್ರೆ ಅವರ ಬ್ಯಾಗ್‌ಗಳನ್ನು ಎರಡು ಬಾರಿ ಪರಿಶೀಲಿಸಲಾಗಿದೆ, ಆದರೆ ಅಧಿಕಾರದಲ್ಲಿರುವ ರಾಜಕಾರಣಿಗಳ ಬ್ಯಾಗ್‌ಗಳನ್ನು ಈ ರೀತಿ ಪರಿಶೀಲಿಸುವುದಿಲ್ಲ ಎಂದು ಸುಪ್ರಿಯಾ ಸುಳೆ ಹೇಳಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 13, 2024 02:23 PM
Latest Videos