ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ

|

Updated on: Jul 21, 2024 | 3:44 PM

ನಟಿ ಸಪ್ತಮಿ ಗೌಡ ಒಳ್ಳೆಯ ನಟಿ. ಈಗಾಗಲೇ ‘ಕಾಂತಾರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ನಟಿಯಾಗುವುದಕ್ಕೂ ಮುನ್ನ ಅವರೊಬ್ಬರು ಕ್ರೀಡಾಪಟು. ಇದೀಗ ನಟಿಯರ ಕ್ರಿಕೆಟ್ ಪಂದ್ಯವೊಂದರಲ್ಲಿ ಹೇಗೆ ಬ್ಯಾಟ್ ಬೀಸಿದ್ದಾರೆ ನೋಡಿ ನಟಿ ಸಪ್ತಮಿ.

ನಟಿ ಸಪ್ತಮಿ ಗೌಡ ನಟಿಸಿರುವ ಕೆಲವೇ ಸಿನಿಮಾಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅಂದಹಾಗೆ ಸಪ್ತಮಿ ಗೌಡ ಸಿನಿಮಾ ನಟಿಯಾಗುವ ಮುನ್ನ ಬಹಳ ಒಳ್ಳೆ ಕ್ರೀಡಾಪಟು. ಈಜುಗಾರ್ತಿಯಾಗಿ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಈಜು ಮಾತ್ರವೇ ಅಲ್ಲದೆ ಬೇರೆ ಬೇರೆ ಕೆಲವು ಕ್ರೀಡೆಗಳಲ್ಲಿಯೂ ಸಪ್ತಮಿಗೌಡ ನಿಸ್ಸೀಮರು. ಯಾವುದೇ ಕ್ರೀಡೆಯನ್ನಾಗಲಿ ಗೆಲ್ಲುವ ಛಲದೊಂದಿಗೆ ಆಡುತ್ತಾರೆ. ನಿನ್ನೆಯಷ್ಟೆ ಕ್ವೀನ್ಸ್ ಪ್ರೀಮಿಯರ್ ಲೀಗ್ ಉದ್ಘಾಟನೆ ಆಗಿದ್ದು, ಚಿತ್ರರಂಗದ ಹಲವು ನಟಿಯರು ಈ ಲೀಗ್​ನಲ್ಲಿ ಭಾಗಿಯಾಗಿದ್ದಾರೆ. ಪಂದ್ಯವೊಂದರಲ್ಲಿ ಸಖತ್ ಆಗಿ ನಟಿ ಸಪ್ತಮಿ ಗೌಡ ಬ್ಯಾಟ್ ಬೀಸಿದ್ದು, ರೋಷಾವೇಷದಿಂದ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ