ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್ಗೆ ಸಮಯ ಮೀಸಲು: ಧ್ರುವ ಸರ್ಜಾ
‘ಮಾರ್ಟಿನ್’ ಸಿನಿಮಾದ ಬಿಡುಗಡೆಯ ಕೆಲಸಗಳಲ್ಲಿ ಬ್ಯುಸಿ ಆಗಿರುವ ನಟ ಧ್ರುವ ಸರ್ಜಾ ಅವರು ಅಭಿಮಾನಿಗಳ ಕಡೆಗೂ ಗಮನ ನೀಡಿದ್ದಾರೆ. ಪ್ರತಿ ಭಾನುವಾರದಂತೆ ಅವರು ಇಂದು (ಜುಲೈ 21) ಕೂಡ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಟ ಧ್ರುವ ಸರ್ಜಾ ಅವರು ಪ್ರತಿ ಭಾನುವಾರ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಧ್ರುವ ಅವರನ್ನು ನೋಡಲು ಬೇರೆ ಬೇರೆ ಊರುಗಳಿಂದ ಬರುವ ಅಭಿಮಾನಿಗಳು ಬಗೆಬಗೆಯ ಗಿಫ್ಟ್ ತರುತ್ತಾರೆ. ನೆಚ್ಚಿನ ಹೀರೋ ಮುಂದೆ ಡೈಲಾಗ್ ಹೊಡೆಯುತ್ತಾರೆ. ಹಾಗಾಗಿ ಧ್ರುವ ಅವರು ಅಭಿಮಾನಿಗಳಿಗಾಗಿ ಪ್ರತಿ ಭಾನುವಾರವನ್ನು ಮೀಸಲಿಡುತ್ತಾರೆ. ಇದಕ್ಕೆ ನಟನ ಕುಟುಂಬದವರ ಬೆಂಬಲ ಕೂಡ ಇದೆ. ಆ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ. ‘ಇದು ಬೆಲೆ ಕಟ್ಟಲಾಗದ ಕ್ಷಣಗಳು. ಯಾರೋ ಹೆತ್ತ ಮಕ್ಕಳು ಇಲ್ಲಿ ಬಂದು ನಮಗೋಸ್ಕರ ಟೈಮ್ ಕೊಡುತ್ತಾರೆ. ನನಗಾಗಿ ಡೈಲಾಗ್ ಹೇಳುತ್ತಾರೆ, ಡೈಲಾಗ್ ಬರೆಯುತ್ತಾರೆ. ಅದು ಖುಷಿ ಕೊಡುವ ವಿಚಾರ. ನಮ್ಮ ಕುಟುಂಬದವರು ಕೂಡ ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ಹೆಂಡತಿ, ಮಕ್ಕಳು, ತಂದೆ-ತಾಯಿ ಭಾನುವಾರ ಹೊರಗೆ ಹೋಗೋಣ ಅಂತ ಕೇಳಲ್ಲ. ನಾನು ಫ್ಯಾನ್ಸ್ ಜೊತೆ ಬ್ಯುಸಿಯಾಗಿ ಇರುತ್ತೇನೆ ಎಂಬುದು ಅವರಿಗೂ ಗೊತ್ತು’ ಎಂದಿದ್ದಾರೆ ಧ್ರುವ ಸರ್ಜಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 21, 2024 02:52 PM
Latest Videos