ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ

ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ

ಮಂಜುನಾಥ ಸಿ.
|

Updated on: Jul 21, 2024 | 1:52 PM

ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಭಿನ್ನಾಭಿಪ್ರಾಯ ಇರುವುದು ತಿಳಿದಿರುವ ವಿಷಯವೇ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ದರ್ಶನ ಬಗ್ಗೆ ಧ್ರುವ ಮಾತನಾಡಿರಲಿಲ್ಲ. ಇದೀಗ ಕೊನೆಗೂ ಪ್ರಕರಣದ ಬಗ್ಗೆ ಧ್ರುವ ಟಿವಿ9 ಜೊತೆ ಮಾತನಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಬಗ್ಗೆ ಹಲವರು ಮಾತನಾಡಿದ್ದಾರೆ. ದರ್ಶನ್ ಪರವಾಗಿರುವವರು, ವಿರುದ್ಧವಾಗಿರುವವರು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪ್ರಕರಣದ ಬೆಳವಣಿಗೆ ಬಗ್ಗೆ ಕೇಳಿದಾಗ ‘ಇದೆಲ್ಲ ಬೆಳವಣಿಗೆ’ನಾ ಎಂದಿದ್ದರು ಧ್ರುವ ಸರ್ಜಾ. ಈಗ ಟಿವಿ9 ಜೊತೆಗೆ ಮಾತನಾಡಿರುವ ನಟ ಧ್ರುವ ಸರ್ಜಾ, ‘ಕಷ್ಟದಲ್ಲಿದ್ದಾರೆ, ನೋವಿನಲ್ಲಿದ್ದಾರೆ ಈ ಸಂದರ್ಭದಲ್ಲಿ ನಮ್ಮದೂ ಒಂದು ಕಲ್ಲಿರಲಿ ಎಂದು ಬೀಸಲು ಹೋಗುವುದಿಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ರೇಣುಕಾ ಸ್ವಾಮಿಗೂ ಮಗು ಆಗಲಿದೆ. ಅವರ ಕುಟುಂಬಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಏನೇ ಆಗಲಿ ಅಗಲಿರುವ ರೇಣುಕಾ ಸ್ವಾಮಿಗೆ ನ್ಯಾಯ ಸಿಗಬೇಕು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ