ವೈರಲ್ ವಿಡಿಯೋ: ವಿದ್ಯಾರ್ಥಿಗಳ ಜೊತೆ ಊಟ ಮಾಡಿದ ಮಂಗ.. ಅಚ್ಚರಿಗೊಂಡ ಸ್ಥಳೀಯರು..

|

Updated on: Jan 25, 2024 | 4:04 PM

Trending Video: ಸುತ್ತಲಿದ್ದ ವಿದ್ಯಾರ್ಥಿಗಳೆಲ್ಲ ಕೋತಿಯ ಚೇಷ್ಟೆ ನೋಡಿ ಖುಷಿಪಟ್ಟರು. ಬಳಿಕ ವಿದ್ಯಾರ್ಥಿಗಳು ಅದರ ಮೈದಡವಿ, ದೇಹವನ್ನು ಮುಟ್ಟಿ ಯಾವುದೇ ಭಯವಿಲ್ಲದೆ ಆಟವಾಡಿದರು. ವಿದ್ಯಾರ್ಥಿಗಳು ಮಂಗನ ಜೊತೆ ಉತ್ತಮ ಸ್ನೇಹ ಬೆಳೆಸಿದರು. ಇದೀಗ ಮಂಗನ ವಿಚಿತ್ರ ಚೇಷ್ಟೆಗಳ ವಿಡಿಯೋ ವೈರಲ್ ಆಗಿದೆ.

ಏಲೂರು ಜಿಲ್ಲೆ (ಆಂದ್ರ ಪ್ರದೇಶ), ಜನವರಿ 24: ಆ ಮುಸುವ (ಮಂಗ) ಮಾಡಿದ ನಾನಾ ಮಂಗಾಟಗಳನ್ನು ಕಂಡು ಅಲ್ಲಿದ್ದವರೆಲ್ಲ ಮುಸುಮುಸು ನಗುತ್ತಾ ಸಂತಸಪಟ್ಟರು. ಅಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಆಟವಾಡಿ ಮೋಜು ಮಸ್ತಿ ಮಾಡಿ ಅವರೊಂದಿಗೆ ಊಟ ಸಹ ಮಾಡಿತು ಆ ಮಂಗ. ಆಮೇಲೆ ಅಲ್ಲಿದ್ದ ವಾಹನವೊಂದರ ಕನ್ನಡಿಯಲ್ಲಿ ಕೋತಿ ತನ್ನ ಸೌಂದರ್ಯವನ್ನು ನೋಡಿಕೊಂಡಿತು! ಪ್ರಸ್ತುತ ಅದರ ಕಮಂಗಿ ಚೇಷ್ಟೆಗಳ ವಿಡಿಯೋ ವೈರಲ್ ಆಗುತ್ತಿದೆ.

ಏಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಂ ಜಿಲ್ಲಾ ಪರಿಷತ್ ನ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿದ್ದ ಕೆಲವರು ಕೋತಿಯ ಚೇಷ್ಟೆಗಳನ್ನು ತಮ್ಮ ಸೆಲ್‌ಫೋನ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ಕೋತಿಯು ಊಟ ಮಾಡುತ್ತಿದ್ದ ವಿದ್ಯಾರ್ಥಿಗಳ ಬಳಿಗೆ ತೆರಳಿ ಕುಳಿತುಕೊಂಡಿತು. ಒಬ್ಬ ವಿದ್ಯಾರ್ಥಿ ತನ್ನ ತಟ್ಟೆಯಲ್ಲಿದ್ದ ಆಹಾರವನ್ನು ಅದಕ್ಕೂ ಹಾಕಿದನು. ಒಂದಿಷ್ಟು ಆಹಾರದ ರುಚಿ ನೋಡಿದ ಮಂಗ ವಿದ್ಯಾರ್ಥಿಗಳ ಜೊತೆ ಜೊತೆಗೆ ಒಂದೇ ತಟ್ಟೆಯಲ್ಲಿ ತಿನ್ನಲು ಆರಂಭಿಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Jan 25, 2024 04:04 PM