ಅಯೋಧ್ಯೆ ಮಂದಿರ ನಿರ್ಮಾಣದಲ್ಲಿ ಗದಗ ಯುವ ಶಿಲ್ಪಿಯ ಕೈಚಳಕಕ್ಕೆ ಎಲ್ಲರೂ ಫುಲ್ ಫಿದಾ!
ಅಯೋಧ್ಯೆಯಲ್ಲಿ ನಮ್ಮ ಕೆಲಸದ ಬಗ್ಗೆ ಸಾಕಷ್ಟು ಪರೀಕ್ಷೆ ಮಾಡಿದ್ರು. ನಮ್ಮ ಉತ್ತಮ ಕೆಲಸ ನೋಡಿ ಟ್ರಸ್ಟ್ ನವರು ಅವಕಾಶ ಕೊಟ್ರು. ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಗಣೇಶ ಮೂರ್ತಿ ಹಾಗೂ ಕಂಬಗಳ ಕೆತ್ತನೆ ಮಾಡಿದ್ದೇನೆ. ಇದು ನನಗೆ ಜೀವನದಲ್ಲೇ ಶ್ರೇಷ್ಠ ದಿನಗಳು- ಯುವಶಿಲ್ಪಿ ರಮೇಶ್ ಕಮ್ಮಾರ್
ಭಾರತ ದೇಶದಲ್ಲಿ ಈಗ ಸಡಗರ, ಸಂಭ್ರಮ ಮುಗಿಲು ಮುಟ್ಟಿದೆ. ಕೋಟ್ಯಾಂತರ ಹಿಂದೂಗಳ ಆರಾಧ್ಯ ದೇವರು ಶ್ರೀ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಆದ್ರೆ, ಸುಂದರ ಶ್ರೀರಾಮ ಮಂದಿರಕ್ಕೂ ಗದಗ ಜಿಲ್ಲೆಗೂ ಸಾಕಷ್ಟು ನಂಟಿದೆ. ಅಯೋಧ್ಯೆ ಸುಂದರ ದೇವಸ್ಥಾನದ ನಿರ್ಮಾಣದಲ್ಲಿ ಗದಗ ಜಿಲ್ಲೆಯ ಹಳ್ಳಿ ಯುವ ಶಿಲ್ಪಿ ಪಾತ್ರ ಮುಖ್ಯವಾಗಿದೆ. ಹಳ್ಳಿ ಶಿಲ್ಪಿ ಕೈಯಲ್ಲೂ ಕಂಬಗಳು, ಮೂರ್ತಿಗಳು ಅರಳಿವೆ. ಅಯೋಧ್ಯೆ ಮಂದಿರ ನಿರ್ಮಾಣದ ಬಳಿಕ ಗ್ರಾಮಕ್ಕೆ ಆಗಮಿಸಿದ ಶಿಲ್ಪಿಗೆ ಗೌರವದಿಂದ ಸ್ವಾಗತಿಸಿ, ಸನ್ಮಾನಿಸಿದ್ದಾರೆ. ಹೆತ್ತವ್ರು ಫುಲ್ ಖುಷ್ ಆಗಿದ್ದಾರೆ.
ಗದಗ ಜಿಲ್ಲೆಯಲ್ಲೂ ಅಯೋಧ್ಯೆ ಶ್ರೀರಾಮನಿಗೆ ಫುಲ್ ಜೈ ಎಂದಿದ್ದಾರೆ. ಗದಗ ಜಿಲ್ಲೆಯ ಯುವ ಶಿಲ್ಪಿಯ ಕೈಯಲ್ಲೂ ಅಯೋಧ್ಯೆ ಮಂದಿರ ಅರಳಿದೆ. ಹೌದು ಗದಗ ತಾಲೂಕಿನ ಅಂತೂರಬೆಂತೂರ ಗ್ರಾಮದ ಯುವಶಿಲ್ಪಿ ರಮೇಶ್ ಕಮ್ಮಾರ್ ಕೂಡ ಅಯೋಧ್ಯೆ ರಾಮ ಮಂದಿರದಲ್ಲಿ ಕೆಲಸ ಮಾಡಿದ್ದಾರೆ. ಶ್ರೀರಾಮ ಮಂದಿರದೊಳಗಿನ ಕಂಬಗಳು, ಮೂರ್ತಿಗಳ ಕೆತ್ತನೆ ಮಾಡಿದ್ದಾರೆ. ಯುವಶಿಲ್ಪಿ ರಮೇಶ್ ಗೆ ಧಾರವಾಡ ಜಿಲ್ಲೆಯ ಶಿಲ್ಪಿ ರವೀಂದ್ರ ಆಚಾರ್ಯ ಅವ್ರ ಮೂಲಕ ಕರೆ ಬಂದಿದೆ. ಅಯೋಧ್ಯೆ ಶ್ರೀರಾಮ ಮಂದಿರ ಕೆಲಸಕ್ಕೆ ಬರ್ತಿಯಾ ಅಂತ ಕೇಳಿದ್ದಾರೆ. ಫುಲ್ ಖುಷಿಯಾಗಿ ರಮೇಶ್ ಕಮ್ಮಾರ್ ತಕ್ಷಣ ಯಸ್ ಎಂದಿದ್ದಾನೆ.
ಅಯೋಧ್ಯೆಯಲ್ಲಿ ನಮ್ಮ ಕೆಲಸದ ಬಗ್ಗೆ ಸಾಕಷ್ಟು ಪರೀಕ್ಷೆ ಮಾಡಿದ್ರು. ನಮ್ಮ ಉತ್ತಮ ಕೆಲಸ ನೋಡಿ ಟ್ರಸ್ಟ್ ನವರು ಅವಕಾಶ ಕೊಟ್ರು. ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಗಣೇಶ ಮೂರ್ತಿ ಹಾಗೂ ಕಂಬಗಳ ಕೆತ್ತನೆ ಮಾಡಿದ್ದೇನೆ. ಇದು ನನಗೆ ಜೀವನದಲ್ಲೇ ಶ್ರೇಷ್ಠ ದಿನಗಳು ಅಂತ ಸಂತಸ ವ್ಯಕ್ತಪಡಿಸಿದ್ದಾನೆ. ಈಗ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದ್ದು, ತುಂಬ ಖಷಿಯಾಗಿದೆ. ನನ್ನ ಕೆಲಸ ನನ್ನೂರಿಗೆ ಹೆಮ್ಮೆಯಾಗಿದೆ ಅಂತ ಯುವ ಶಿಲ್ಪಿ ರಮೇಶ್ ಕಮ್ಮಾರ್ ಟಿವಿ9 ಜೊತೆ ಖುಷಿ ಹಂಚಿಕೊಂಡಿದ್ದಾನೆ.
ಶ್ರೀರಾಮನೂರಿನಲ್ಲಿ ನಮ್ಮೂರಿನ ಯುವಕನ ಕೈಯಲ್ಲಿ ಶಿಲ್ಪ ಕಲೆಗಳು ಅರಳಿದ ಸುದ್ದಿ ಕೇಳಿ ಫುಲ್ ಖುಷಿಯಾಗಿದ್ದಾರೆ. ಅಂತೂರಬೆಂತೂರ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ನಮ್ಮೂರಿನ ಯುವಶಿಲ್ಪಿ ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾಗಿದ್ದಕ್ಕೆ ಗೆಳೆಯರು, ಗ್ರಾಮಸ್ಥರು ಸಂತಸ ವಕ್ತಪಡಿಸಿದ್ದಾರೆ. ಶ್ರೀರಾಮ ಮಂದಿರ ಕೆಲಸ ಮುಗಿಸಿ ಗ್ರಾಮಕ್ಕೆ ಆಗಮಿಸಿದ ಯುವ ಶಿಲ್ಪಿಗೆ ಗ್ರಾಮದ ಯುವಕರು, ಹಿರಿಯರು ಸನ್ಮಾನ ಮಾಡಿ ಗೌರವಿಸಿದ್ದಾರೆ.
ಅಂತೂರಬೆಂತೂರ ಗ್ರಾಮದಲ್ಲಿ ಎಲ್ಲೆಲ್ಲೂ ಜೈಶ್ರೀರಾಮ ಘೋಷಣೆಗಳು ಮುಗಿಲುಮುಟ್ಟಿವೆ. ಇನ್ನೂ ಅಯೋಧ್ಯೆ ಪ್ರಭು ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಮಗನ ಶಿಲ್ಪಕಲೆ ಬಗ್ಗೆ ತಾಯಿ ಫುಲ್ ಖುಷಿಯಾಗಿದ್ದಾಳೆ. ಮಗನ ಸಾಧನೆ ಭಾಳ್ ಖುಷಿ ತಂದಿದೆ ಎಂದಿದ್ದಾರೆ. ಇನ್ನೂ ಗದಗ ಜಿಲ್ಲೆಯ ಗಜೇಂದ್ರಗಢ ಶಿಲ್ಪಿಯೂ ಅಯೋಧ್ಯೆ ರಾಮಮಂದಿರದ ನಿರ್ಮಾಣದಲ್ಲಿ ಕೆಲಸ ಮಾಡಿದ್ದಾರೆ. ಮುತ್ತಣ ಅಳವಂಡಿ ಕೂಡ ಎರಡು ತಿಂಗಳು ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಗಜೇದ್ರಗಡದಲ್ಲೂ ಶ್ರೀರಾಮ ಘೋಷಣೆ ಜೋರಾಗಿದೆ. ಶಿಲ್ಪಿ ಮುತ್ತಣ್ಣನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಇನ್ನು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಭಾರತೀಯ ಸೇನೆಯ ಭದ್ರಕೋಟೆಯಲ್ಲಿ ನಿರ್ಮಾಣ ಮಾಡಲಾಗಿದೆ ಅಂತ ಶಿಲ್ಪಿ ಹೇಳಿದ್ದಾರೆ. ನಾವೂ ಶಿಲ್ಪಿಯಾದ್ರೂ ಇಂಚಿಂಚು ಚೆಕ್ ಮಾಡಿ ಮಂದಿರ ಆವರಣಕ್ಕೆ ಪ್ರವೇಶ ಅನುಮತಿ ನೀಡ್ತಾಯಿದ್ರು. ಮಿಲ್ಟಿ ಕೋಟೆ ಬಗ್ಗೆ ಟಿರ್ವಿಗೆ ಶಿಲ್ಪಿ ರಮೇಶ ಹೇಳಿದ್ದಾರೆ. ಪ್ರತಿಯೊಬ್ಬರನ್ನು ಇಂಚಿಂಚು ಚೆಕ್ ಮಾಡಿ ಒಳಗಡೆ ಬಿಡ್ತಾಯಿದ್ರು. ಮೂರು ಹಂತದಲ್ಲಿ ತಪಾಸಣೆ ಮಾಡಿ ಒಳಗೆ ಬಿಡ್ತಾಯಿದ್ರಂತೆ. ಒಟ್ಟಾರೆಯಾಗಿ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದಲ್ಲೂ ಗದಗ ಶಿಲ್ಪಿಗಳ ಪಾತ್ರ ಮುಖ್ಯವಾಗಿದೆ. ಹೀಗಾಗಿ ಗದಗ ಜಿಲ್ಲೆಯ ಹೆಮ್ಮೆಯ ಶಿಲ್ಪಿಗಳು ಅಂತ ಹೆಮ್ಮೆ ಪಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ