Video: ಅರಿಜೋನಾದಲ್ಲಿ ಬಿಸಿನೆಸ್ ಜೆಟ್​ಗೆ ಖಾಸಗಿ ವಿಮಾನ ಡಿಕ್ಕಿ, ಓರ್ವ ಸಾವು, ಹಲವರಿಗೆ ಗಾಯ

Updated on: Feb 11, 2025 | 9:11 AM

ಅರಿಜೋನಾದ ಸ್ಕಾಟ್ಸ್‌ಡೇಲ್ ವಿಮಾನ ನಿಲ್ದಾಣದಲ್ಲಿ ಬಿಸಿನೆಟ್​ ಜೆಟ್​ಗೆ ಖಾಸಗಿ ವಿಮಾನ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬಿಸಿನೆಸ್​ ಜೆಟ್​ಗೆ ಖಾಸಗಿ ವಿಮಾನ ಡಿಕ್ಕಿ ಹೊಡೆದಿದೆ. ಸಧ್ಯಕ್ಕೆ ರನ್​ ವೇ ಮುಚ್ಚಲಾಗಿದೆ. ಸ್ಕಾಟ್‌ಡೇಲ್ ವಿಮಾನ ನಿಲ್ದಾಣವು ಫೀನಿಕ್ಸ್ ಪ್ರದೇಶದಿಂದ ಒಳಗೆ ಮತ್ತು ಹೊರಗೆ ಬರುವ ವಿಮಾನಗಳಿಗೆ ಜನಪ್ರಿಯ ಕೇಂದ್ರವಾಗಿದೆ.

ಅರಿಜೋನಾದ ಸ್ಕಾಟ್ಸ್‌ಡೇಲ್ ವಿಮಾನ ನಿಲ್ದಾಣದಲ್ಲಿ ಬಿಸಿನೆಸ್​ ಜೆಟ್​ಗೆ ಖಾಸಗಿ ವಿಮಾನ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬಿಸಿನೆಸ್​ ಜೆಟ್​ಗೆ ಖಾಸಗಿ ವಿಮಾನ ಡಿಕ್ಕಿ ಹೊಡೆದಿದೆ. ಸಧ್ಯಕ್ಕೆ ರನ್​ ವೇ ಮುಚ್ಚಲಾಗಿದೆ. ಸ್ಕಾಟ್‌ಡೇಲ್ ವಿಮಾನ ನಿಲ್ದಾಣವು ಫೀನಿಕ್ಸ್ ಪ್ರದೇಶದಿಂದ ಒಳಗೆ ಮತ್ತು ಹೊರಗೆ ಬರುವ ವಿಮಾನಗಳಿಗೆ ಜನಪ್ರಿಯ ಕೇಂದ್ರವಾಗಿದೆ. ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಖಾಸಗಿ ಜೆಟ್ ರನ್‌ವೇಯಿಂದ ಹೊರಗೆ ಹೋಗಿದೆ. ಆದರೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ವಿಮಾನ ನಿಯಂತ್ರಣ ಕಳೆದುಕೊಂಡಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Feb 11, 2025 08:46 AM