Video: ಹಾರ್ನ್​ ಮಾಡಬೇಡಿ ಎಂದಿದ್ದಕ್ಕೆ ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ

Updated on: May 05, 2025 | 2:26 PM

ಹಾರ್ನ್​ ಮಾಡಬೇಡಿ ಎಂದು ವಿನಯವಾಗಿ ಕೇಳಿಕೊಂಡರೂ ಕೋಪಗೊಂಡು ವ್ಯಕ್ತಿ ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಬಿಹಾರ ಮೂಲದ ಭದ್ರತಾ ಸಿಬ್ಬಂದಿ ರಾಜೀವ್ ಕುಮಾರ್ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ರಾತ್ರಿ ಕರ್ತವ್ಯ ಮುಗಿಸಿ ಮಹಿಪಾಲಪುರದಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಪಾಲಪುರ ಚೌಕ್ ನಲ್ಲಿ ಕ್ಯಾಬ್​ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದರು.

ದೆಹಲಿ, ಮೇ 05: ಹಾರ್ನ್​ ಮಾಡಬೇಡಿ ಎಂದು  ವಿನಯವಾಗಿ ಕೇಳಿಕೊಂಡರೂ ಕೋಪಗೊಂಡು ವ್ಯಕ್ತಿ ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಬಿಹಾರ ಮೂಲದ ಭದ್ರತಾ ಸಿಬ್ಬಂದಿ ರಾಜೀವ್ ಕುಮಾರ್ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ  ಕರ್ತವ್ಯ ಮುಗಿಸಿ ಮಹಿಪಾಲಪುರದಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಮಹಿಪಾಲಪುರ ಚೌಕ್ ನಲ್ಲಿ ಕ್ಯಾಬ್​ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಜೋರಾಗಿ ಹಾರ್ನ್ ಮಾಡುತ್ತಾ ಹಿಂದಿನಿಂದ ಒಂದು ಕಾರು ಬಂದಿತ್ತು, ಅದಕ್ಕೆ ಕುಮಾರ್ ಹಾರ್ನ್​ ಮಾಡಬೇಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಕಾರು ಚಾಲಕ ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ್ದಾನೆ. ಘಟನೆಯಲ್ಲಿ ಕುಮಾರ್ ಅವರ ಎರಡೂ ಕಾಲಿನ ಮೂಳೆಗಳು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಆರು ಗಂಟೆಗಳಲ್ಲಿ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 05, 2025 01:59 PM