ಮಾಧುರಿ ದೀಕ್ಷಿತ್ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
Vidya Balan: ನಟಿ ವಿದ್ಯಾ ಬಾಲನ್ ಹಾಗೂ ಮಾಧುರಿ ದೀಕ್ಷಿತ್ ಅದ್ಭುತ ನಟಿಯರು ಜೊತೆಗೆ ಬಹಳ ಒಳ್ಳೆಯ ನೃತ್ಯಗಾರ್ತಿಯರು. ಇಬ್ಬರೂ ಒಟ್ಟಿಗೆ ವೇದಿಕೆ ಮೇಲೆ ನೃತ್ಯ ಮಾಡಿದ್ದಾರೆ. ಆದರೆ ನೃತ್ಯ ಮಾಡುವಾಗ ವಿದ್ಯಾ ಬಾಲನ್ ಬಿದ್ದು ಬಿಟ್ಟಿದ್ದಾರೆ. ವಿಡಿಯೋ ನೋಡಿ.
ಮಾಧುರಿ ದೀಕ್ಷಿತ್ ಅದ್ಭುತ ನಟಿ ಜೊತೆಗೆ ಅದ್ಭುತವಾದ ನೃತ್ಯಗಾರ್ತಿ. ವಿದ್ಯಾ ಬಾಲನ್ ಸಹ ಅದ್ಭುತವಾದ ನಟಿ ಮತ್ತು ನೃತ್ಯಗಾರ್ತಿ. ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರುವ ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ವಿದ್ಯಾ ಬಾಲನ್ ಮತ್ತು ಮಾಧುರಿ ದೀಕ್ಷಿತ್ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ವಿದ್ಯಾ ಬಾಲನ್ ಮತ್ತು ಮಾಧುರಿ ದೀಕ್ಷಿತ್ ಒಟ್ಟಿಗೆ ನೃತ್ಯ ಮಾಡುತ್ತಿದ್ದರು. ಆದರೆ ವೇದಿಕೆ ಮೇಲೆ ನೃತ್ಯ ಮಾಡುವಾಗಲೇ ನಟಿ ವಿದ್ಯಾ ಬಾಲನ್ ಬಿದ್ದು ಬಿಟ್ಟಿದ್ದಾರೆ. ಆದರೆ ಅಷ್ಟೆ ಚಾಕಚಕ್ಯತೆಯಿಂದ ನೃತ್ಯ ಮುಂದುವರೆಸಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಭೇಷ್ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos