Video: ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು, 8 ಜನ ನಾಪತ್ತೆ

Updated on: Jul 20, 2025 | 9:34 AM

ವಿಯೆಟ್ನಾಂನ ಕ್ವಾಂಗ್ ನಿನ್ಹ್ ಪ್ರಾಂತ್ಯದ ಹಾ ಲಾಂಗ್ ಕೊಲ್ಲಿಯಲ್ಲಿ 53 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಹಡಗು ಮಗುಚಿ ಬಿದ್ದಿದ್ದು, ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಡಗಿನಲ್ಲಿ 48 ಪ್ರವಾಸಿಗರು ಮತ್ತು 5 ಸಿಬ್ಬಂದಿ ಇದ್ದರು, ಮಕ್ಕಳು ಕೂಡ ಇದ್ದರು. ಬಲವಾದ ಗಾಳಿಯಿಂದಾಗಿ ಹಡಗು ಮಗುಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಯೆಟ್ನಾಂನ ಕ್ವಾಂಗ್ ನಿನ್ಹ್ ಪ್ರಾಂತ್ಯದ ಹಾ ಲಾಂಗ್ ಕೊಲ್ಲಿಯಲ್ಲಿ 53 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಹಡಗು ಮಗುಚಿ ಬಿದ್ದಿದ್ದು, ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಡಗಿನಲ್ಲಿ 48 ಪ್ರವಾಸಿಗರು ಮತ್ತು 5 ಸಿಬ್ಬಂದಿ ಇದ್ದರು, ಮಕ್ಕಳು ಕೂಡ ಇದ್ದರು. ಬಲವಾದ ಗಾಳಿಯಿಂದಾಗಿ ಹಡಗು ಮಗುಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಾಧ್ಯವಾದಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಲಭ್ಯವಿರುವ ಎಲ್ಲಾ ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಸಜ್ಜುಗೊಳಿಸುವಂತೆ ಅವರು ರಾಷ್ಟ್ರೀಯ ರಕ್ಷಣಾ ಸಚಿವಾಲಯಕ್ಕೆ ಪ್ರಧಾನಿ ಫಾಮ್ ಸೂಚನೆ ನೀಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ