ಸಂಗೀತಾ ಕಾರಣಕ್ಕೆ ವಿನಯ್​-ಕಾರ್ತಿಕ್​ ನಡುವೆ ಮನಸ್ತಾಪ; ಬಿಗ್​ ಬಾಸ್​ನಲ್ಲಿ ಇದು ನಿರ್ಣಾಯಕ ಹಂತ

Updated on: Oct 18, 2023 | 5:30 PM

Bigg Boss Kannada: ‘ಬಿಗ್​​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ನಡುವೆ ಬಿರುಕು ಉಂಟಾಗಿದೆ. ಇವರಿಬ್ಬರ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಂದಿಗ್ಧ ಪರಿಸ್ಥಿತಿ ಕಾರ್ತಿಕ್​ಗೆ ಎದುರಾಗಿದೆ. ಈ ಮೂವರ ನಡುವಿನ ಸಂಭಾಷಣೆಗಳ ಝಲಕ್​ ಈ ವಿಡಿಯೋದಲ್ಲಿ ಇದೆ.

ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್​ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೂ ಅವರು ಕಾರ್ತಿಕ್​ ಮಹೇಶ್​ ಜೊತೆ ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಬಾಂಧವ್ಯ ಬೆಳೆದಿದೆ. ಆದರೆ ವಿನಯ್​ ಗೌಡ (Vijay Gowda) ಜೊತೆ ಸಂಗೀತಾ ಕಿರಿಕ್​ ಮಾಡಿಕೊಂಡಿದ್ದಾರೆ. ಈಗ ಈ ಕಿರಿಕ್​ ಬೇರೊಂದು ಹಂತಕ್ಕೆ ಹೋಗಿದೆ. ಸಂಗೀತಾ ಜೊತೆ ಕಾರ್ತಿಕ್​ ಆಪ್ತವಾಗಿ ಇರುವುದರ ಬಗ್ಗೆ ವಿನಯ್​ ಅವರು ತಕರಾರು ತೆಗೆದಿದ್ದಾರೆ. ‘ನಾನಾ ಅಥವಾ ಅವಳಾ’ ಎಂದು ಕಾರ್ತಿಕ್​ಗೆ ವಿನಯ್​ ಅವರು ಆಯ್ಕೆ ನೀಡಿದ್ದಾರೆ. ಅತ್ತ ಸಂಗೀತಾ ಅವರು ಗಟ್ಟಿನಿರ್ಧಾರಕ್ಕೆ ಬಂದಿದ್ದಾರೆ. ಒಂದು ವೇಳೆ ಕಾರ್ತಿಕ್​ (Karthik Mahesh) ಕಡೆಯಿಂದ ಬೆಂಬಲ ಸಿಗದಿದ್ದರೂ ಕೂಡ ತಾವು ವಿನಯ್​ ವಿರುದ್ಧ ಒಂಟಿಯಾಗಿ ಹೋರಾಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಕಾರ್ತಿಕ್​ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಮೂವರ ನಡುವಿನ ಸಂಭಾಷಣೆಗಳ ಝಲಕ್​ ಈ ವಿಡಿಯೋದಲ್ಲಿ ಇದೆ. ಜಿಯೋ ಸಿನಿಮಾ ಮೂಲಕ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಕಾರ್ಯಕ್ರಮವನ್ನು 24 ಗಂಟೆಯೂ ಉಚಿತವಾಗಿ ನೋಡಬಹುದು. ಪ್ರತಿ ದಿನದ ಸಂಚಿಕೆಗಳು ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 18, 2023 05:25 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More